ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೊರೋನಾ ಖಚಿತವಾಗಿದೆ. ಪ್ರಸ್ತುತ, ಸಿಎಂಗೆ ಯಾವುದೇ ಲಕ್ಷಣಗಳಿಲ್ಲ. ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಪ್ರಸ್ತುತ ಕಣ್ಣೂರಿನ ಸ್ವಗೃಹದಲ್ಲಿರುವುದಾಗಿ ತಿಳಿದುಬಂದಿದೆ.
ಮುಖ್ಯಮಂತ್ರಿಯವರ ಪುತ್ರಿ ವೀಣಾ ಮತ್ತು ಅಳಿಯ ಮೊಹಮ್ಮದ್ ರಿಯಾಜ್ ಅವರಿಗೆ ನಿನ್ನೆ ಸೋಂಕು ಪತ್ತೆಯಾಗಿತ್ತು. ಇದನ್ನು ಅನುಸರಿಸಿ ಸಿಎಂ ಕೂಡ ಪರೀಕ್ಷೆಗೊಳಗಾಗಿದ್ದು ಸೋಂಕು ದೃಢಪಡಿಸಲಾಗಿದೆ.
ಮುಖ್ಯಮಂತ್ರಿಯೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕಣ್ಗಾವಲಲ್ಲಿರಲು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ. ಅವರು ಚುನಾವಣೆಯ ಸಮಯದಲ್ಲಿ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದರು.