ಕಾಸರಗೋಡು: ಕೇಂದ್ರ ಸರ್ಕಾರವು ನೀಡುವ ಉಚಿತ ಲಸಿಕೆಯನ್ನು ಕೇರಳದಲ್ಲಿ ಪೋಲು ಮಾಡಲಾಗುತ್ತಿದೆ ಎಂದು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಸಿ.ಆರ್.ಪ್ರಫುಲ್ ಕೃಷ್ಣನ್ ಹೇಳಿದ್ದಾರೆ. ಸಾಕಷ್ಟು ಲಸಿಕೆ ದಾಸ್ತಾನು ಇದ್ದರೂ ಅದನ್ನು ವಿತರಿಸದೆ ಸಂಗ್ರಹಿಸಲಾಗುತ್ತಿದೆ. ಅವನ್ನು ರಾಜ್ಯ ಸರ್ಕಾರವು ಆತ್ಮೀಯ ವಲಯ ಮತ್ತು ಪಕ್ಷಗಳಿಗೆ ಹಿಂಬಾಗಿಲ ಮೂಲಕ ನೀಡುತ್ತಿದೆ ಎಂದು ಪ್ರಫುಲ್ ಕೃಷ್ಣನ್ ಆರೋಪಿಸಿರುವರು.
ಅವರು ಗುರುವಾರ ಕಾಸರಗೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೇರಳದಲ್ಲಿ ಲಸಿಕೆಯ ಕೃತಕ ಕೊರತೆ ಇದೆ. ಏ.27 Àಂದು 444330 ಡೋಸ್ ಲಸಿಕೆ ಇತ್ತು. ಆದರೆ, 28ರಂದು ಕೇವಲ 35,000 ಲಸಿಕೆಗಳನ್ನು ವಿತರಿಸಲಾಯಿತು. ಇಂದು ಸುಮಾರು ನಾಲ್ಕು ಲಕ್ಷ ಸ್ಲಾಟ್‍ಗಳನ್ನು ಹೊಂದಿದ್ದರೂ, ಪೂರೈಕೆ ತುಂಬಾ ಕಡಿಮೆಯಾಗಿದೆ ಎಂದು ಅವರು ಬಹಿರಂಗಪಡಿಸಿದರು.
ಕೇರಳದಲ್ಲಿ ಆನ್‍ಲೈನ್ ಬುಕಿಂಗ್ ಕೂಡ ಹೆಚ್ಚುತ್ತಿದೆ. ಹಿಂಬಾಗಿಲ ನೇಮಕದ ಮೂಲಕ ಪ್ರಸಿದ್ದರಾಗಿರುವ ಪಿಣರಾಯಿ ಸರ್ಕಾರವು ಕೊರೋನಾ ಲಸಿಕೆಯನ್ನು ಆಪ್ತ ವಲಯಕ್ಕೆ ಮತ್ತು ಸ್ವ ಪಕ್ಷೀಯರಿಗೆ ಹಿಂಬಾಗಿಲಿಂದ ನೀಡುತ್ತಿದೆ. ಇತರ ರಾಜ್ಯಗಳು ಸರ್ಕಾರಿ ಯೋಜನೆಗಳ ಮೂಲಕ 90 ಶೇ. ವ್ಯಾಕ್ಸಿನೇಷನ್ ನೀಡಿದರೆ, ಕೇರಳ 40 ಶೇ.ಖಾಸಗಿ ಆಸ್ಪತ್ರೆಗಳಿಗೆ ಒದಗಿಸುತ್ತದೆ. ಲಸಿಕೆಗಾಗಿ ಜನಸಂಖ್ಯೆಯ ಹೆಚ್ಚಿನ ಭಾಗವು ಪಾವತಿಸಬೇಕಾಗಿತ್ತು. ಇದನ್ನು ಕೇಂದ್ರ ಸರ್ಕಾರವು ಉಚಿತವಾಗಿ ನೀಡಿತು. ಇತರ ರಾಜ್ಯಗಳು ಲಸಿಕೆಗಾಗಿ ಸಾವಿರಾರು ಕೇಂದ್ರಗಳನ್ನು ಸ್ಥಾಪಿಸಿದರೆ, ಕೇರಳವು 500 ಕ್ಕಿಂತ ಕಡಿಮೆ ಕೇಂದ್ರಗಳನ್ನು ಸ್ಥಾಪಿಸಿದೆ. ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಜನದಟ್ಟಣೆಯು ಸೋಂಕು ಸಮುದಾಯದಲ್ಲಿ ಹರಡಲು ಕಾರಣವಾಗಿದೆ. ಕೇರಳದಲ್ಲಿ ಲಸಿಕೆ ನೋಂದಣಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರಫುಲ್ ಕೃಷ್ಣನ್ ಆರೋಪಿಸಿದ್ದಾರೆ.
ಸರ್ಕಾರದ ಇಂತಹ ಕ್ರಮಗಳು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಪ್ರಜ್ಞಾಪೂರ್ವಕ ಪ್ರಯತ್ನದ ಭಾಗವಾಗಿದೆ. ಕೊರೋನಾ ಲಸಿಕೆ ಸಂಗ್ರಹದ ವಿರುದ್ಧ ಪ್ರತಿಭಟನೆಯನ್ನು ಇಂದು ಕೊರೋನಾ ಮಾನದಂಡಗಳಿಗೆ ಅನುಸಾರವಾಗಿ ರಾಜ್ಯಾದ್ಯಂತ ಕಲೆಕ್ಟರೇಟ್‍ಗಳ ಮುಂದೆ ಆಯೋಜಿಸಲಾಗುವುದು ಎಂದು ಕೃಷ್ಣನ್ ಹೇಳಿದರು.