ತಿರುವನಂತಪುರ: ವಟ್ಟಿಯೂರ್ಕಾವ್ ನ ಯುಡಿಎಫ್ ಅಭ್ಯರ್ಥಿ ವೀಣಾ ಎಸ್ ನಾಯರ್ ಅವರ ಪ್ರಚಾರ ಪೋಸ್ಟರ್ ಗಳು ಅಂಗಡಿಗಳಿಗೆ ರದ್ದಿಗೆ ಮಾರಾಟಮಾಡಿರುವುದು ಬೆಳಕಿಗೆ ಬಂದಿದೆ. ಪೋಸ್ಟರ್ ಗಳನ್ನು ಯಾರು ಮಾರಾಟಕ್ಕೆ ತಂದರು ಎಂದು ಕಾಂಗ್ರೆಸ್ ನಾಯಕತ್ವ ತನಿಖೆ ನಡೆಸುತ್ತಿದೆ.
ಇವುಗಳು ಕುರವಂಕೋಣಂ ಪ್ರದೇಶದಲ್ಲಿ ವಿತರಿಸಲಾದ ಪೋಸ್ಟರ್ ಗಳಾಗಿವೆ ಎಂದು ಸೂಚನೆಗಳು ಲಭ್ಯವಾಗಿದೆÀ. ಪೋಸ್ಟರ್ ಗಳನ್ನು ನಂದಂಕೋಡೆ ವೈಎಂಆರ್ ಜಂಕ್ಷನ್‍ನಲ್ಲಿರುವ ಅಂಗಡಿಯಲ್ಲಿ ಮಾರಾಟ ಮಾಡಲಾಯಿತು. 50 ಕೆಜಿ ಬಳಕೆಯಾಗದ ಪೋಸ್ಟರ್ ಗಳನ್ನು ಪ್ರತಿ ಕೆಜಿಗೆ 10 ರೂ.ಗಳಂತೆ ಮಾರಾಟ ಮಾಡಲಾಗಿತ್ತು.
ಮತದಾನ ನಡೆದು ಎರಡೇ ದಿನಗಳಲ್ಲಿ ಪೋಸ್ಟರ್ ಗಳನ್ನು ಮಾರಾಟಗೈದಿರುವ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಟ್ಟಿಯೂರ್ಕ ಕ್ಷೇತ್ರದಲ್ಲಿ, ಈ ಮಧ್ಯೆ, ಎಲ್ಲಾ ರಂಗಗಳು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿವೆ. ವೀಣಾ ಬಿಜೆಪಿ ಅಭ್ಯರ್ಥಿ ವಿ.ವಿ.ರಾಜೇಶ್ ಮತ್ತು ಎಲ್‍ಡಿಎಫ್ ಅಭ್ಯರ್ಥಿ ವಿ.ಕೆ.ಪ್ರಶಾಂತ್ ವಿರುದ್ಧ ಸ್ಪರ್ಧಿಸಿದ್ದರು. ಮೂರೂ ರಂಗಗಳು ಕ್ಷೇತ್ರದಲ್ಲಿ ಭಾರೀ ಸ್ಪರ್ಧಾತ್ಮಕತೆಯಿಂದ ಹೋರಾಡಿದ್ದವು.