ಬದಿಯಡ್ಕ: ಮಂಗಳೂರಿನ ಶರವು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ಸುದರ್ಶನ ವಿಜಯ ಪ್ರಸಂಗವು ಮನೋಜ್ಞವಾಗಿ ಮೂಡಿಬಂತು. ದೇವೇಂದ್ರನಾಗಿ ಹರ್ಷಪ್ರಸಾದ ಪುತ್ತಿಗೆ, ದೇವೇಂದ್ರನ ಬಲಗಳಾಗಿ ಮನ್ವಿತ್ ನಾರಾಯಣಮಂಗಲ ಹಾಗೂ ವರ್ಷಾಲಕ್ಷ್ಮಣ್, ಶತ್ರುಪ್ರಸೂದನ ಪಾತ್ರದಲ್ಲಿ ಶ್ರೀಶ ಕುಮಾರ ಪಂಜಿತ್ತಡ್ಕ, ವಿಷ್ಣುವಾಗಿ ಧನೀಷ್ ಕುಂಡಂಕುಳಿ, ಲಕ್ಷ್ಮಿಯ ಪಾತ್ರದಲ್ಲಿ ಸುಪ್ರೀತಾ ಸುಧೀರ್, ಸುದರ್ಶನನಾಗಿ ವಿದ್ಯಾ ಆನಂದ ಭಟ್ ಪಾತ್ರಗಳಿಗೆ ಜೀವತುಂಬಿದರು.
ಭಾಗವತರಾಗಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ, ಚಕ್ರತಾಳದಲ್ಲಿ ಸುಧೀರ್ ಕುಮಾರ್ ರೈ ಹಾಗೂ ನಿಶಾಂತ್ ನೀರ್ಚಾಲು ಕುಶಲತೆ ಮೆರೆದರು. ನೇಪಥ್ಯದಲ್ಲಿ ಕೇಶವ ಕಿನ್ಯ ಹಾಗೂ ಗಿರೀಶ್ ಕುಂಪಲ ಸಹಕರಿಸಿದರು.