ಕಾಸರಗೋಡು: ಕಾಞಂಗಾಡಿನಲ್ಲಿ ಯುವಮೋರ್ಚಾ ಜಿಲ್ಲಾಸಮಿತಿ ಉಪಾಧ್ಯಕ್ಷ ಶ್ರೀಜಿತ್(30)ಹತ್ಯಾ ಯತ್ನಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಸಿಪಿಎಂ ಕಾರ್ಯಕರ್ತರಿಗೆ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾಗಿದೆ. ಶ್ರೀಜಿತ್ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚೇತರಿಸುತ್ತಿದ್ದಾರೆ. ಶ್ರೀಜಿತ್ ಅವರು ಬೈಕಲ್ಲಿ ಸಂಚರಿಸುತ್ತಿರುವ ಮಧ್ಯೆ ಮಂಗಳವಾರ ತಡರಾತ್ರಿ ತಡೆದುನಿಲ್ಲಿಸಿ ಎರಡೂ ಕೈ ಹಾಗೂ ಕಾಲುಗಳಿಗೆ ಮಾರಕಾಯುಧಗಳಿಂದ ಕಡಿಯಲಾಗಿದೆ.
ತೃಕ್ಕರಿಪುರದಲ್ಲಿ ಐಕ್ಯರಂಗ ಅಭ್ಯರ್ಥಿ ಎಂ.ಸಿ ಜೋಸೆಫ್ ಅವರ ಬೂತ್ ಏಜೆಂಟ್ ಮೇಲೆ ತಂಡವೊಂದು ಹಲ್ಲೆ ನಡೆಸಿ, ದಿಗ್ಬಂಧನ ವಿಧಿಸಿದ್ದು, ಇವರನ್ನು ಬಿಡುಗಡೆಗೊಳಿಸಲು ಆಗಮಿಸಿದ ಎಂ.ಸಿ ಜೋಸೆಫ್ ಅವರ ಕಾರಿಗೂ ಹಾನಿಯೆಸಗಲಾಗಿದೆ. ಉದುಮದಲ್ಲಿ ಐಕ್ಯರಂಗ ಅಭ್ಯರ್ಥಿ ಬಾಲಕೃಷ್ಣನ್ ಅವರ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ.