ಮುಳ್ಳೇರಿಯ: ಪೈಕ ಪಾರೆತ್ತೋಡು ಶ್ರೀನಾಗರಾಜ, ರಕ್ತೇಶ್ವರಿ, ಗುಳಿಗ ಬನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಏ.29 ರಿಂದ ಮೇ.2ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಹಾಗೂ ಕೂಪಂ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಶ್ರೀಕ್ಷೇತ್ರ ಪರಿಸರದಲ್ಲಿ ನಡೆಯಿತು.
ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂದನ ಅಯರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಕೃಷ್ಣನ್ ನಾಯರ್ ಅವರಿಗೆ ಆಮಂತ್ರಣ ಪತ್ರಿಕೆ ಹಾಗೂ ಕೂಪಂ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಈ ಸಂದರ್ಭ ನಿತ್ಯಾನಂದ ನೆಲ್ಲಿತ್ತಲ, ಕುಂಞÂ ರಾಮ ಚಾತಪ್ಪಾಡಿ, ಪ್ರೊ.ಎ.ಶ್ರೀನಾಥ್, ನಾರಾಯಣ ಶೆಟ್ಟಿ ಪಾರೆತ್ತೋಡಿ, ಸುಧಾಕರ ಕಾಡಾನ್ ವೀಡ್, ಕೃಷ್ಣನ್ ನಾಯರ್, ಪದ್ಮನಾಭ ಪೂಜಾರಿ ನೆಕ್ರಾಜೆ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ದಿವಾಕರ ಪೈಕ ಸ್ವಾಗತಿಸಿ, ಕಾರ್ಯದರ್ಶಿ ಧಮರೀಶ ಪೈಕ ಅಕ್ಕರ ವಂದಿಸಿದರು.