ಕಾಸರಗೋಡು: ವಿಧಾನಸಭಾ ಚುನಾವಣೆ ಅಂಗವಾಗಿ ಮುದ್ರಣಗೊಳ್ಳುವ ಭಿತ್ತಿಪತ್ರ, ಕರಪತ್ರ ಮುಂತಾದ ಪ್ರಚಾರ ಸಾಮಗ್ರಿಗಳ ತಲಾ ಒಂದು ಪ್ರತಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಚರಿಸುವ ಸಾರ್ವಜನಿಕ ಸಂಪರ್ಕ ಇಲಾಖೆಯ ಮೀಡಿಯಾ ಸರ್ಟಿಫಿಕೇಶನ್ ಆ್ಯಂಡ್ ಮೋನಿಟರಿಂಗ್ ಸಮಿತಿಗೆ(ಎಂ.ಸಿ.ಎಂ.ಸಿ) ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‍ಬಾಬು ತಿಳಿಸಿದ್ದಾರೆ.
ಪ್ರಕಾಶಕ, ಮುದ್ರಕರ ಹೆಸರು ಒಳಗೊಂಡಿರದ ಯಾವುದೇ ಪ್ರಚಾರಸಾಮಗ್ರಿಗಳನ್ನೂ ಸ್ವೀಕರಿಸಲಾಗುವುದಿಲ್ಲ. ಮುದ್ರಿಸಿರುವ ಚುನಾವಣಾ ಸಾಮಗ್ರಿಗಳ ಲೆಕ್ಕಾಚಾರ, ಯಾರಿಗಾಗಿ ಮುದ್ರಿಸಲಾಗಿದೆ ಎಂಬ ಮಾಹಿತಿಯನ್ನೂ ಮುದ್ರಣಾಲಯಗಳು ತಮ್ಮ ರಿಜಿಸ್ಟರ್‍ನಲ್ಲಿ ದಾಖಲಿಸಿಕೊಳ್ಳಬೇಕು. ಈ ನಿರ್ದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.