ತಿರುವನಂತಪುರ: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಭಾಗವಾಗಿ ಐಟಿ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ.
ಎಸ್‍ಎಸ್‍ಎಲ್‍ಸಿ ತರಗತಿಯ ಮೇ 5 ರಂದು ಪ್ರಾರಂಭವಾಗಬೇಕಿದ್ದ ಐಟಿ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಐಟಿ ಪ್ರಾಯೋಗಿಕ ಪರೀಕ್ಷೆಯ ಕುರಿತು ಹೆಚ್ಚಿನ ಸೂಚನೆಗಳನ್ನು ನಂತರ ನೀಡಲಾಗುವುದು ಎಂದು ವಿದ್ಯಾಭ್ಯಾಸ ಇಲಾಖೆ ತಿಳಿಸಿದೆ.
ಈ ಹಿಂದೆ ರಾಜ್ಯದಲ್ಲಿ ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಹೈಯರ್ ಸೆಕೆಂಡರಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಆದರೆ, ಕೋವಿಡ್ ಮಾನದಂಡಗಳ ಅನುಸಾರವಾಗಿ ಎಸ್‍ಎಸ್‍ಎಲ್‍ಸಿ ಐಟಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಸೂಚಿಸಿದ್ದರು. ಆದರೆ ಆ ನಿರ್ಧಾರವನ್ನು ಈಗ ಪುನಃ ಪರಿಶೀಲಿಸಿ ಮುಂದೂಡಲಾಗಿದೆ.