ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಎಲ್ಲಾ ಸೇವನೆಗಳನ್ನು ಇಂದು (ಬುಧವಾರ) ಮಧ್ಯರಾತ್ರಿಯಿಂದಲೇ ಸ್ಥಗಿತಗೊಳಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ದೇವರ ದರ್ಶನ, ಸೇವೆ, ತೀರ್ಥ ಪ್ರಸಾದ ವಿತರಣೆ, ದಾಸೋಹ (ಅನ್ನ ಸಂತರ್ಪಣೆ) ಮತ್ತು ವಿಶೇಷ ಉತ್ಸವಾದಿಗಳು ದೇವಾಲಯಗಳಲ್ಲಿನ ವಸತಿಗೃಹ, ಅತಿಥಿ ಗೃಹಗಳನ್ನು ಹಂಚಿಕೆ ಮಾಡುವುದನ್ನು ಇಂದಿನಿಂದಲೇ (ಏಪ್ರಿಲ್ 21) ರದ್ದುಪಡಿಸಲಾಗಿದೆ ಎಂದು ಆಡಳಿತ ಮಂಡಳಿ ಸುತ್ತೋಲೆಯಲ್ಲಿ ಹೇಳಿದೆ.
ಸದ್ಯ ಕರೊನಾ ಕ್ಷಣಕ್ಷಣಕ್ಕೂ ಏರುತ್ತಲೇ ಇರುವ ಕಾರಣ, ಧಾರ್ಮಿಕ ಕ್ಷೇತ್ರಗಳು ಎಷ್ಟು ದಿನಗಳ ಮಟ್ಟಿಗೆ ಮುಚ್ಚಬೇಕು ಎಂಬ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಕುಕ್ಕೆ ದೇವಸ್ಥಾನವನ್ನು ಮುಂದಿನ ಆದೇಶದವರೆಗೆ ಮುಚ್ಚಿಡಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಿದ್ದಾರೆ.