ಉಪ್ಪಳ: ಕೆನರಾ ಬ್ಯಾಂಕ್ ಪೈವಳಿಕೆ ಶಾಖೆಯ ವತಿಯಿಂದ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರಿಗೆ ಭಾಗ್ಯಜ್ಯೋತಿ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಪೈವಳಿಗೆ ನಗರ ಸರ್ಕಾರಿ ಪ್ರೌಢಶಾಲೆಯ 5ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಆರಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಖಾ ಪ್ರಬಂಧಕ ಶ್ರೀಜಿತ್, ಸಹಾಯಕ ಪ್ರಬಂಧಕ ಸುಂದರ ಸಿ.ಯಚ್., ಬ್ಯಾಂಕ್ ನ ಕೃಷಿ ಅಭಿವೃದ್ದಿ ಅಧಿಕಾರಿ ವಿಲ್ಸನ್ ಪಾಲ್ಗೊಂಡಿದ್ದರು. ಸಿಬ್ಬಂದಿಗಳಾದ ಹರೀಶ್ ಪುದುಕೊಳಿ, ಪಾರ್ವತಿ ಶುಭಹಾರೈಸಿದರು. ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತು ರಕ್ಷಕರು ಉಪಸ್ಥಿತರಿದರು. ಅಧ್ಯಾಪಕ ಸಂಜೀವ ಸ್ವಾಗತಿಸಿ, ವಂದಿಸಿದರು.