HEALTH TIPS

ಜನಗಣತಿ ವೇಳೆ ಒಬಿಸಿ ಸಂಖ್ಯೆ ದಾಖಲಿಸಲು ಆಯೋಗ ಮನವಿ

             ನವದೆಹಲಿ : ಜನಗಣತಿ 2021ರ ಭಾಗವಾಗಿ ದೇಶದಲ್ಲಿನ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆಯ ದಾಖಲೆಗಳನ್ನು ಸಂಗ್ರಹಿಸುವಂತೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು (ಎನ್‌ಸಿಬಿಸಿ) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಮನವಿ ಮಾಡಿದೆ.

        ಎನ್‌ಸಿಬಿಸಿ ಕಾರ್ಯದರ್ಶಿ ಆನಂದ್ ಕುಮಾರ್ ಅವರು ಸಾಮಾಜಿಕ ನ್ಯಾಯ ಸಚಿವಾಲಯದ ಕಾರ್ಯದರ್ಶಿಗೆ ಗುರುವಾರ ಈ ಶಿಫಾರಸು ಸಲ್ಲಿಸಿದ್ದಾರೆ.

        ಜನಗಣತಿಯಲ್ಲಿ ಒಬಿಸಿ ಜನಸಂಖ್ಯೆಯ ಪ್ರತ್ಯೇಕ ಗಣತಿ ವಿವರಕ್ಕಾಗಿ ಮಲ್ಲೇಶ್ ಯಾದವ್ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಈ ಮನವಿ ಮಾಡಲಾಗಿದೆ. ಈ ರಿಟ್ ಅರ್ಜಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಮರ್ಥಿಸಿಕೊಳ್ಳಲಿದೆ ಎಂಬ ಭರವಸೆ ಇರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ಇತ್ತೀಚೆಗಷ್ಟೇ ಎನ್‌ಸಿಬಿಸಿ ನಡೆಸಿದ್ದ ಪೂರ್ಣ ಪ್ರಮಾಣದ ಆಯೋಗ ಸಭೆಯಲ್ಲಿ ಚರ್ಚೆ ನಡೆಸಿ, ಅವಿರೋಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಎನ್‌ಸಿಬಿಸಿಗೆ ನರೇಂದ್ರ ಮೋದಿ ಸರ್ಕಾರದ ಮೊದಲನೇ ಅವಧಿಯಲ್ಲಿ ಸಾಂವಿಧಾನಿಕ ಮಾನ್ಯತೆ ನೀಡಲಾಗಿತ್ತು.

       ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಜಿ ರೋಹಿಣಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಒಬಿಸಿಯಲ್ಲಿನ ದುರ್ಬಲ ವರ್ಗಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಉಪ ವಿಭಾಗಗಳನ್ನು ರಚಿಸುವ ಹೊಣೆ ನೀಡಲಾಗಿತ್ತು. ಆದರೆ ರೋಹಿಣಿ ಆಯೋಗ ಕೂಡ ಒಬಿಸಿ ಅಡಿಯಲ್ಲಿ ವರ್ಗೀಕರಿಸಲಾದ ವಿವಿಧ ಸಮುದಾಯಗಳ ಕುರಿತು ಸೂಕ್ತ ದತ್ತಾಂಶದ ಕೊರತೆ ಇರುವುದರಿಂದ ಇದು ಕಷ್ಟಕರವಾಗಿದೆ ಎಂದು ಹೇಳಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries