ಪಾಲಕ್ಕಾಡ್: ಪಾಲಕ್ಕಾಡ್‍ನ ಜಾದೂಗಾರ ಸಮುದಾಯವಾದ ಮ್ಯಾಜಿಕ್ ಮಿಷನ್ ನೇತೃತ್ವದಲ್ಲಿ ನಾಳೆ(ಏ.11) ಪಟ್ಟಾಂಬಿಯಲ್ಲಿ ಆಲ್ ಕೇರಳ ಮ್ಯಜೀಶಿಯನ್ಸ್ ಸಮಾವೇಶ ಹಮ್ಮಿಕೊಂಡಿದೆ.
ಪಟ್ಟಾಂಬಿ ನಗರ ಗೋಪುರದಲ್ಲಿ ನಡೆಯಲಿರುವ ಈ ಸಮಾವೇಶವನ್ನು ಖ್ಯಾತ ಜಾದೂಗಾರ ಮತ್ತು ಮರ್ಲಿನ್ ಪ್ರಶಸ್ತಿ ಪುರಸ್ಕøತ ಟಾಮಿ ಮಂಜುರಾನ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೇರಳದ ವಿವಿಧ ಭಾಗಗಳಿಂದ ಸುಮಾರು 100 ಜಾದೂಗಾರರು ಭಾಗವಹಿಸಲಿದ್ದಾರೆ. ಮ್ಯಾಜಿಕ್ ಮಿಷನ್ ಅಧ್ಯಕ್ಷ-ಜಾದೂಗಾರ ಪಿ.ಎಂ. ಉಪೇಂದ್ರ ಅವರು ಕಾರ್ಯದ ಅಧ್ಯಕ್ಷತೆ ವಹಿಸುವರು. ಮ್ಯಾಜಿಕ್ ಮಿಷನ್ ಆಯೋಜಿಸಿರುವ ಆನ್‍ಲೈನ್ ಮ್ಯಾಜಿಕ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡುವ ಸಮಾರಂಭವೂ ನಡೆಯಲಿದೆ.
ಟಾಮಿ ಮಂಜುರಾನ್, ಪಿ.ಎಂ. ಉಪೇಂದ್ರ ಪಾಲಕ್ಕಾಡ್ ಮತ್ತು ಆನಂದ್ ಮೆಳತ್ತೂರ್ ಮ್ಯಾಜಿಕ್ ತರಬೇತಿ ತರಗತಿ ನಡೆಸಲಿದ್ದಾರೆ. ಸಮಾರಂಭದಲ್ಲಿ ಜಾದೂ ಕುಟುಂಬದ ರ್ಯಾಂಕ್ ವಿಜೇತ ತಮ್ಮನಮ್ ಅಬ್ದುಲ್ಲಾ, ಶೋರ್ನೂರ್ ರವಿ, ಕುಂಬಿಡಿ ರಾಧಾಕೃಷ್ಣನ್, ಮುರಲೀಧರನ್ ಪಟ್ಟಾಂಬಿ, ಆಶಿಕ್ ಅಲತೂರ್, ಸುರೇಶ್ ಪಟ್ಟಾಂಬಿ ಮತ್ತು ಸಿಪಿ ಅಮೃತದಾಸ್ ಅವರನ್ನು ಗೌರವಿಸಲಾಗುವುದು.
ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಮ್ಯಾಜಿಕ್ ಸ್ಪರ್ಧೆಯೂ ನಡೆಯಲಿದೆ. ಮ್ಯಾಜಿಕ್ ಮಿಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲಾಮ್ ವಲ್ಲಪುಳ, ಕಾರ್ಯಕ್ರಮ ಕನ್ವೀನರ್ ಮುರಲೀಧರನ್ ಪಟ್ಟಾಂಬಿ ಮತ್ತು ಖಜಾಂಚಿ ಅಖಿಲ್ ಮಾಸ್ಟರ್ ಸಮಾರಂಭವನ್ನು ಮುನ್ನಡೆಸಲಿದ್ದಾರೆ. ಈ ಬಗ್ಗೆ ಶುಕ್ರವಾರ ಪಾಲಕ್ಕಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತರಾದ ಕುಂಬಿಡಿ ರಾಧಾಕೃಷ್ಣನ್, ಸಲಾಮ್ ವಲ್ಲಪುಳ, ಮುರಲೀಧರನ್ ಪಟ್ಟಾಂಬಿ ಮತ್ತು ಸುರೇಶ್ ಪಟ್ಟಾಂಬಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.