ಉಪ್ಪಳ : ಮಂಗಲ್ಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಮಂಜೇಶ್ವರ ಸರಕಾರಿ ತಾಲೂಕು ಆಸ್ಪತ್ರೆಯ ನೌಕರನೋರ್ವ ರೋಗಿಗಳಲ್ಲಿ ದರ್ಪ ತೋರಿಸುತ್ತಿರುವುದಾಗಿ ಆರೋಪಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದ ರೋಗಿಗಳು ವೈದ್ಯರಲ್ಲಿ ತಪಾಸಣೆ ನಡೆಸಿದ ಬಳಿಕ ಚಿಕಿತ್ಸಾ ವಿಭಾಗಕ್ಕೆ ಕಳುಹಿಸಿದಾಗ ಇಲ್ಲಿನ ನರ್ಸಿಂಗ್ ಸಹಾಯಕ ಜಯಕುಮಾರ್ ಎಂಬಾತ ರೋಗಿಗಳಲ್ಲಿ ಮತ್ತು ರೋಗಿಗಳೊಂದಿಗೆ ಸಹಾಯಕ್ಕೆ ಬಂದವರಲ್ಲಿ ಅನಾಗರಿಕವಾಗಿ ವರ್ತಿಸುತ್ತಿರುವುದಲ್ಲದೆ ಮಹಿಳೆಯರಲ್ಲಿ ಅಪಮರ್ಯಾದೆಯಲ್ಲಿ ವರ್ತಿಸುತ್ತಿರುವುದಾಗಿ ವ್ಯಾಪಕ ಆರೋಪ ಕೇಳಿ ಬರುತ್ತಿದೆ.ಈತ ಈ ಕೊರೊನಾ ಕಾಲದಲ್ಲಿ ತನ್ನ ಕೈಗಳಿಗೆ ಗ್ಲೌವ್ಸ್ ಧರಿಸದೆ ರೋಗಿಗಳಿಗೆ ಬ್ಯಾಂಡೇಜ್ ಮಾಡುವ ಬಗ್ಗೆ ಎಚ್ಚರಿಸಿದರೂ ಅದನ್ನು ಪರಿಗಣಿಸದೆ ರೋಗಿಗಳಲ್ಲಿ ಜಗಳಕ್ಕೆ ಮುಂದಾಗುತ್ತಿರುವುದಾಗಿಯೂ ಆರೋಪಗಳಿವೆ. ಇಲ್ಲಿನ ವೈದ್ಯರಲ್ಲಿ ಈತನ ಕುರಿತು ದೂರು ಸಲ್ಲಿಸಿದರೂ ಇದಕ್ಕೆ ಪರಿಹಾರವಾಗಿಲ್ಲ.ಆದುದರಿಂದ ಈತನ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಮಹಿಳೆಯರು ದೂರು ನೀಡಲು ಮುಂದಾಗಿರುವರು.