ತಿರುವನಂತಪುರ: ವ್ಯಾಕ್ಸಿನೇಷನ್ ಶಿಬಿರಗಳು ಕೋವಿಡ್ ರೋಗ ಹರಡಲು ಕಾರಣವಾಗಬಹುದು ಎಂದು ಐಎಂಎ ಎಚ್ಚರಿಸಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಅಜಾಗ್ರತೆಗಳು ಕೇರಳದಲ್ಲಿ ಸೋಂಕು ಭಾರೀ ಪ್ರಮಾಣದಲ್ಲಿ ಹರಡಲು ಮುಖ್ಯ ಕಾರಣವಾಯಿತೆಂದು ಅದು ವಿಶ್ಲೇಶಿಸಿದೆ.
ಮತ ಎಣಿಸುವ ದಿನ ಕಟ್ಟುನಿಟ್ಟಿನ ನಿರ್ಬಂಧಗಳು ಬೇಕಾಗುತ್ತವೆ ಎಂದು ಐಎಂಎ ಅಧಿಕಾರಿಗಳು ತಿಳಿಸಿದ್ದಾರೆ.