ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಹರಡುವಿಕೆಯು ತೀವ್ರಾವಸ್ಥೆಯಲ್ಲಿದ್ದು, ನಿಯಂತ್ರಣವನ್ನು ಬಿಗಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಜನರು ಹೊರಗೆ ಹೋಗಿ ಸಭೆ ಸೇರಬಾರದು ಎಂದು ಸಿಎಂ ವಿನಂತಿಸಿದರು.
ಸಾಮಾನ್ಯ ಆಮ್ಲಜನಕದ ಮಟ್ಟವನ್ನು ಹೊಂದಿರುವ ಜನರು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರದ ಹೊರತು ಅವರಿಗೆ ಕೋವಿಡ್ ಪಾಸಿಟಿವ್ ಇದ್ದರೂ ಅವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ಶಿಫಾರಸು ಹೊರಡಿಸಲಿದೆ ಎಂದವರು ತಿಳಿಸಿರುವರು.
ಅಗತ್ಯವಿರುವ ಆಮ್ಲಜನಕ ರಾಜ್ಯದಲ್ಲಿ ಲಭ್ಯವಿರುತ್ತದೆ. ಆಮ್ಲಜನಕವನ್ನು ಇನ್ನಷ್ಟು ಸಂಗ್ರಹಿಸಿಡಲು ಅನುಕೂಲವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುವುದು. ಕಾಸರಗೋಡು ಜಿಲ್ಲೆಗೆ ನೆರೆಯ ಕರ್ನಾಟಕದಿಂದ ಆಮ್ಲಜನಕ ಲಭ್ಯವಿದೆ. ಆದರೆ ಅಲ್ಲಿಯೂ ಕೋವಿಡ್ ವ್ಯಾಪಕಗೊಂಡಿರುವುದರಿಂದ ಲಭ್ಯತೆಗೆ ಹಿನ್ನಡೆ ಉಂಟಾಗುತ್ತಿದ್ದು ರಾಜ್ಯ ಮುಖ್ಯ ಕಾರ್ಯದರ್ಶಿ ಕರ್ನಾಟಕ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತನಾಡಲಿದ್ದಾರೆ. ಕಾಸರಗೋಡು ಮತ್ತು ಇತರ ಸ್ಥಳಗಳಿಗೆ ಆಮ್ಲಜನಕ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.