ಕೊಚ್ಚಿ: ಅನೇಕ ಬ್ರಾಂಡ್‍ಗಳ ಜಾಹೀರಾತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯುತ್ತಿರುವುದು ಸಾಮಾನ್ಯ. ಆದರೆ ಭೀಮಾ ಜ್ಯುವೆಲ್ಲರಿಯ ಜಾಹೀರಾತೊಂದು ವೀಕ್ಷಕರ ಕಣ್ಣು ಮತ್ತು ಮನಸ್ಸನ್ನು ಸೆಳೆಯುತ್ತಿದ್ದು ವೈರಲ್ ಆಗಿದೆ. ಸಾಮಾನ್ಯವಾಗಿ ಆಭರಣ ಮಳಿಗೆಗಳ ಜಾಹೀರಾತಿನ ವಸ್ತು ವಿಷಯಗಳು ಮದುವೆ ಅಥವಾ ಇತರ ಸಮಾರಂಭವಾಗಿರುತ್ತದೆ. ಆದರೆ ಅದಕ್ಕಿಂತ ವಿಭಿನ್ನವಾದ ವಿಷಯವೊಂದನ್ನು ಜಾಹೀರಾತಿಗೆ ಬಳಸುವ ಮೂಲಕ ಭೀಮಾ ಜುವೆಲ್ಲರಿಯು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯಲು ಕಾರಣವಾಗಿದೆ.
ನಿಜವಾದ ಪ್ರೀತಿ ಎಂದರೆ ಒಬ್ಬರ ವ್ಯಕ್ತಿತ್ವವನ್ನು ಅಂಗೀಕರಿಸುವ ಬಯಕೆ ಎಂದು ಜಾಹೀರಾತು ನಮಗೆ ತಿಳಿಯಪಡಿಸುತ್ತದೆ. ಭೀಮಾ ಜುವೆಲ್ಲರಿಯ ಜಾಹೀರಾತು ಟ್ರಾನ್ಸ್ ಜೆಂಡರ್ ವ್ಯಕ್ತಿಯ ಜೀವನವನ್ನು ಆಧರಿಸಿದೆ. ಪುರುಷ ದೇಹದಲ್ಲಿ ಮಹಿಳೆಯಾಗಿ ಬದುಕುವ ವ್ಯಕ್ತಿಯನ್ನು ಇಲ್ಲಿ ಸೃಷ್ಟಿಸಲಾಗಿದೆ. ಜಾಹೀರಾತಿನಲ್ಲಿ ಬರುವ ವ್ಯಕ್ತಿಯ ಜೀವನ ಮತ್ತು ಮಗುವಿನ ಪೋಷಕರ ಒಪ್ಪಿಗೆ ಗಮನ ಸೆಳೆಯುತ್ತದೆ.
ಈ ಜಾಹೀರಾತನ್ನು ದೆಹಲಿ ಮೂಲದ ಜಾಹೀರಾತು ಸಂಸ್ಥೆ ಅನಿಮಲ್ ನಿರ್ಮಿಸಿದ್ದು, ಇದನ್ನು ಭರತ್ ಸಿಕ್ಕಾ ನಿರ್ದೇಶಿಸಿದ್ದಾರೆ. ಜಾಹೀರಾತು ಹಲವಾರು ಕಾಮೆಂಟ್‍ಗಳನ್ನು ಸ್ವೀಕರಿಸಿದೆ. 'ಶುದ್ಧವಾಗಿ ಚಿನ್ನ' ಎಂಬ ಟ್ಯಾಗ್‍ಲೈನ್‍ನೊಂದಿಗೆ ಜಾಹೀರಾತನ್ನು ಬಿಡುಗಡೆ ಮಾಡಲಾಗಿದೆ.
ಜಾಹೀರಾತು ಚಿತ್ರವು ಸಾಕಷ್ಟು ಕಾಮೆಂಟ್‍ಗಳನ್ನು ಪಡೆಯುತ್ತಿದೆ. "ಪ್ರಗತಿಯೆಂದರೆ 'ಪೆನ್ನಯಾಲ್ ಪೆÇನ್ ವೇಣಂ' ಹಾಡಿನಿಂದ ಈ ಜಾಹೀರಾತಿಗೆ ಬರುವ ಲಾಭವಾಗಿದೆ ಎಂದು ವೀಡಿಯೊ ಹೇಳುತ್ತದೆ.