HEALTH TIPS

ಅನೇಕ ಬಿಜೆಪಿ ಕಾರ್ಯಕರ್ತರ ರಕ್ತ ಚೆಲ್ಲಿದ ಕೇರಳದ ಮಣ್ಣಿನಲ್ಲಿ ಈ ಬಾರಿ ಕಮಲದ ಹೂವುಗಳು ಅರಳುತ್ತವೆ: ಸ್ಮೃತಿ ಇರಾನಿ

       

      ಬದಿಯಡ್ಕ: ಅನೇಕ ಬಿಜೆಪಿ ಕಾರ್ಯಕರ್ತರ ರಕ್ತ ಚೆಲ್ಲಿದ ಕೇರಳದ ಮಣ್ಣಿನಲ್ಲಿ ಅನೇಕ ಕಮಲದ ಹೂವುಗಳು ಅರಳುತ್ತವೆ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಹೇಳಿದ್ದಾರೆ. ಚುನಾವಣಾ ಪ್ರಚಾರದ ಅಂಗವಾಗಿ ಬದಿಯಡ್ಕದಲ್ಲಿ ನಿನ್ನೆ ಆಯೋಜಿಸಲಾದ ರೋಡ್ ಶೋ ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕೇರಳದಲ್ಲಿ ಬಿದ್ದ ಬಿಜೆಪಿ ಕಾರ್ಯಕರ್ತರ ರಕ್ತಕ್ಕೆ ಈ ಬಾರಿ ಜನರು ಸ್ಪಂದಿಸುತ್ತಾರೆ ಎಂದು ಸ್ಮೃತಿ ಇರಾನಿ ಹೇಳಿದರು.


             ಕೇರಳದಲ್ಲಿ ಸರಣಿಯಂತೆ ಆಡಳಿತಕ್ಕೆ ಬರುತ್ತಿರುವ ಎಡರಂಗ ಹಾಗೂ ಐಕ್ಯರಂಗಗಳು ಹಗರಣಗಳನ್ನು ಮಾಡುವುದರಲ್ಲೇ ಕಾಲಕಳೆದಿದೆ. ಕಾಂಗ್ರೆಸ್ ಸೋಲಾರ್ ಹಗರಣವನ್ನು ಮಾಡಿದರೆ ಕಮ್ಯೂನಿಸ್ಟ್ ಪಕ್ಷವು ಚಿನ್ನದ ಹಗರಣವನ್ನು ಮಾಡಿದೆ. ಸೋನಾ ಹಾಗೂ ಸೋಲಾರ್ ಹಗರಣಗಳು ಕೇರಳಕ್ಕೆ ಶಾಪವಾಗಿದೆ. ಈ ಬಾರಿಯ ಚುನಾವಣೆಯು ಸಂಸ್ಕøತಿ ಹಾಗೂ ಮಹಿಳೆಯರ ರಕ್ಷಣೆಗಾಗಿ, ಯುವಜನತೆಯ ಉದ್ಯೋಗಸೃಷ್ಟಿಗಾಗಿ ಹೋರಾಡುವ ಚುನಾವಣೆಯಾಗಿದೆ. ಐತಿಹಾಸಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ವಿಜಯಿಯಾದರೆ ಅವರಿಗೆ ಕೇಂದ್ರ ಸರ್ಕಾರದ, ದೇಶದ ಪ್ರಧಾನಿಯವರ ಬಾಗಿಲು ಸದಾ ತೆರೆದಿರುತ್ತದೆ. ಊರಿನ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೇಂದ್ರ ಸಚಿವೆ ಸ್ಮøತಿ ಇರಾನಿ ಹೇಳಿದರು.


               ಕೇರಳದಲ್ಲಿ ಶರಣ ಮಂತ್ರವನ್ನು ಹೇಳಿದ ಕಾರಣಕ್ಕೆ ಪ್ರಧಾನಿಯವರ ಮೇಲೆಯೇ ದೂರನ್ನು ನೀಡಿದ ಎಸ್‍ಡಿಪಿಐಯಂತಹ ಪಕ್ಷಗಳೊಂದಿಗೆ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷವು ಹೊಂದಾಣಿಕೆಯನ್ನು ಮಾಡಿ ಚುನಾವಣೆಯನ್ನು ಎದುರಿಸುತ್ತಿರುವುದು ದೌರ್ಭಾಗ್ಯಕರ ಎಂದರು. ಎಡರಂಗವು ಚೈನದ ಕಮ್ಯೂನಿಸ್ಟ್ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ, ಕೇರಳದ ಸಂಸದ ಅಮೇರಿಕದೊಂದಿಗೆ ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ ತಿಳಿದುಬರುತ್ತಿದೆ ಎಡರಂಗ ಚೈನಾದೊಂದಿಗೆ, ಕಾಂಗ್ರೆಸ್ ಪಕ್ಷ ಅಮೇರಿಕದೊಂದಿಗೆ, ಆದರೆ ಭಾರತೀಯ ಜನತಾ ಪಕ್ಷ ಮಾತ್ರ ಭಾರತದೊಂದಿಗೆ ಇದೆ. ಜನರ ಭವಿಷ್ಯದ ಚುನಾವಣೆ ಇದಾಗಿದೆ ಎಂಬುದನ್ನು ಪ್ರತಿಯೊಬ್ಬ ಮತದಾರನೂ ಅರಿತಿರಬೇಕು ಎಂದರು. ಮೀನು ವ್ಯಾಪಾರದಲ್ಲೂ ಕೇರಳ ಸರ್ಕಾರ ಭ್ರಷ್ಟವಾಗಿದೆ ಎಂದು ಅವರು ಹೇಳಿದರು.


         ಎನ್ ಡಿ ಎ ಅಭ್ಯರ್ಥಿ ನ್ಯಾಯವಾದಿ ಕೆ.ಶ್ರೀಕಾಂತ್ ಮಾತನಾಡಿದರು. ಪಕ್ಷದ ನೇತಾರರಾದ ಎಂ. ಸಂಜೀವ ಶೆಟ್ಟಿ, ಹರೀಶ್ ನಾರಂಪಾಡಿ, ರಮೇಶ್ ಕಾಸರಗೋಡು, ರಾಮಪ್ಪ ಮಂಜೇಶ್ವರ, ಕೆ.ಎನ್.ಕೃಷ್ಣ ಭಟ್, ರಜನಿ, ಜನನಿ, ಶೈಲಜಾ ಭಟ್, ಸುಕುಮಾರ ಕುದ್ರೆಪ್ಪಾಡಿ, ಸತೀಶ್ ಕುಂಪಲ, ಸವಿತಾ ಟೀಚರ್, ಸುನಿಲ್ ಪಿ.ಆರ್. ಮೊದಲಾದವರು ವೇದಿಕೆಯಲ್ಲಿದ್ದರು. ಬದಿಯಡ್ಕ ಮೇಲಿನ ಪೇಟೆಯ ಕೃಷಿ ಭವನ ಪರಿಸರದಿಂದ  ಆರಂಭವಾದ ರೋಡ್ ಶೋದಲ್ಲಿ ಪಕ್ಷದ ನೇತಾರರು, ಕಾರ್ಯಕರ್ತರು ಪಾಲ್ಗೊಂಡಿದ್ದರು.


          

         


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries