ಬದಿಯಡ್ಕ: ಕರ್ನಾಟಕ ಜಾನಪದ ಪರಿಷತ್ತಿನ ಪ್ರಸ್ತುನ ಸಾಲಿನ ಪ್ರಶಸ್ತಿಗೆ ಭಾಜನರಾದ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಅವರನ್ನು ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್. ಹಳೆ ವಿದ್ಯಾರ್ಥಿಗಳ ತಂಡದ ಪರವಾಗಿ ಇತ್ತೀಚೆಗೆ ಅವರ ಸ್ವಗೃಹದಲ್ಲಿ ಅಭಿನಂದಿಸಲಾಯಿತು.
ಎನ್.ಎಸ್.ಎಸ್. ಹಳೆ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಮಹೇಶ್ ಏತಡ್ಕ, ಇಬ್ರಾಹಿಂ, ಅಶ್ವಿತ, ಮಹಿಮ, ಮೊಹಮ್ಮದ್ ಇರ್ಷಾದ್ ಮೊದಲಾದವರು ಉಪಸ್ಥಿತರಿದ್ದು ಅಭಿನಂದಿಸಿದರು.