ಪೆರ್ಲ : "ಮತದಾನ ನನ್ನ ಹಕ್ಕು" ಎಂಬ ಆಶಯದೊಂದಿಗೆ ಚುನಾವಣಾ ಸಮಿತಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಹಮ್ಮಿಕೊಂಡ ಕಾರ್ಯಕ್ರಮವು ಪೆರ್ಲ ಪೇಟೆಯಲ್ಲಿ ನಡೆಯಿತು.
ಎಣ್ಮಕಜೆ ಅಂಗನವಾಡಿ ಅಧ್ಯಾಪಕಿಯರ ಹಾಗೂ ನಲಂದ ಕಾಲೇಜು ಎನ್ನೆಸ್ಸಸ್ ಸಹಭಾಗಿತ್ವದಲ್ಲಿ ಮತದಾನದ ಬಗ್ಗೆ ಜಾಗೃತಿ ಜಾಥ ಹಾಗೂ ಸಭೆ ಜರಗಿತು. ಸಿಡಿಪಿಒ ಲತಾ ಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚುನಾವಣಾ ಸಮಿತಿ ಮಂಜೇಶ್ವರ ಮಂಡಲ ಕನ್ವೀನರ್ ಎ.ಟಿ.ಶಶಿ, ಪೆರ್ಲ ನಲಂದಾ ಕಾಲೇಜಿನ ಉಪನ್ಯಾಸಕ ಸುರೇಶ್ ಮಾಸ್ತರ್ ಮತದಾನ ಜಾಗೃತಿ ಬಗ್ಗೆ ಮಾತನಾಡಿದರು. ಉಕ್ಕಿನಡ್ಕ ಅಂಗನವಾಡಿ ಅಧ್ಯಾಪಕಿ ಭವಾನಿ ಸ್ವಾಗತಿಸಿ, ಐಸಿಡಿಎಸ್ ಮಂಜೇಶ್ವರ ವಿಭಾಗ ಮೇಲ್ವಿಚಾರಕಿ ಸುನೀತ ಪಿ.ಎಸ್.ವಂದಿಸಿದರು.
ಕಾರ್ಯಕ್ರಮಕ್ಕಿಂತ ಮೊದಲು ಪೆರ್ಲ ಚೆಕ್‍ಪೋಸ್ಟು ಬಳಿಯಿಂದ ಪೆರ್ಲ ಪೇಟೆಯ ವರೆಗೆ ಮತದಾನ ಜಾಗೃತಿ ಬಗ್ಗೆ ಘೋಷಣೆಯೊಂದಿಗೆ ಮೆರವಣಿಗೆ ನಡೆಯಿತು.
ಚೊಚ್ಚಲ ಮತದಾರರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಸಮಿತಿಯು ಏರ್ಪಡಿಸಿದ "ಸೆಲ್ಫಿ ಕಾರ್ನರ್" ನೆರೆದವರ ಗಮನ ಸೆಳೆಯಿತು.