ತಿರುವನಂತಪುರ: ಎಸ್.ಎಸ್.ಎಲ್.ಸಿ ಮತ್ತು ಪ್ಲಸ್ ಟು ಪರೀಕ್ಷೆಗಳು ಪೂರ್ವ ನಿರ್ಧಆರದಂತೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕೋವಿಡ್ ನೀತಿ ಸಂಹಿತೆಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಯನ್ನು ಮುಂದೂಡುವಂತೆ ಯಾರೂ ಈವರೆಗೆ ಪ್ರಸ್ತಾವನೆ ಮುಂದಿರಿಸಿಲ್ಲ ಎಂದು ಶಿಕ್ಷಣ ನಿರ್ದೇಶಕರು ಹೇಳಿರುವರು.
ಕೋವಿಡ್ ವಿಸ್ತರಣೆಯ ತೀವ್ರ ಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳ ಪರೀಕ್ಷೆ ಬದಲಾಯಿಸಲಾಗಿದೆ. ಕೇರಳ ವಿಶ್ವವಿದ್ಯಾಲಯ, ಮಲಯಾಳಂ ವಿಶ್ವವಿದ್ಯಾಲಯ, ಆರೋಗ್ಯ ವಿಶ್ವವಿದ್ಯಾಲಯ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಸಂಸ್ಕøತ ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ರಾಜ್ಯಪಾಲರ ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು.
ಜೆಇಇ ಮುಖ್ಯ ಪರೀಕ್ಷೆಯನ್ನೂ ಬದಲಾಯಿಸಲಾಗಿದೆ. 27, 28 ಮತ್ತು 30 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರೀಕ್ಷೆಗೆ 15 ದಿನಗಳ ಮೊದಲು ದಿನಾಂಕವನ್ನು ಪ್ರಕಟಿಸುತ್ತದೆ ಎಂದು ಎನ್ ಸಿ ವರದಿ ಮಾಡಿದೆ.