ತೊಡುಪುಳ : ವಿಚಿತ್ರ ಭಾಷೆಯಲ್ಲಿ ಬರೆದ ಪತ್ರವೊಂದು ಮನೆಯ ಮುಖ್ಯದ್ವಾರದ ಚಿಲಕದಲ್ಲಿ ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕೇರಳದ ತೊಡುಪುಳ ನಿವಾಸಿಗಳು ಆತಂಕಕ್ಕೆ ಕಾರಣವಾಗಿದೆ.
ಕಾಗದದ ಒಂದು ತುಣುಕಿನ ಮೇಲೆ ರಕ್ತದ ಕಲೆಗಳು ಸಹ ಇವೆ. ಬಾಗಿಲಿಗೆ ಕಟ್ಟಿರುವ ಸ್ಥಿತಿಯಲ್ಲಿ ತೊಡುಪುಳದ ಸಹಕಾರಿ ಆಸ್ಪತ್ರೆ ಸಮೀಪದ ಥಾಚೆಟ್ ನಗರದ ಬಿಜುಮನ್ ಜಿ ಎಂಬುವರ ಮನೆಯಲ್ಲಿ ಪತ್ತೆಯಾಗಿದೆ.
ಗುರುವಾರ ಬೆಳಗ್ಗೆ ಬಿಜುಮನ್ ಪತ್ರವನ್ನು ನೋಡಿದ್ದಾರೆ. ಮುಖ್ಯದ್ವಾರವನ್ನು ತೆರೆಯಲು ಸಾಧ್ಯವಾಗದಿದ್ದಾಗ ಮನೆಯ ಹಿಂಬಾಗಿಲಿನಿಂದ ಬಂದು ನೋಡಿದಾಗ ಮುಖ್ಯದ್ವಾರದ ಚಿಲಕದಲ್ಲಿ ಪತ್ರ ಪತ್ತೆಯಾಗಿದೆ. ಆದರೆ, ಅದರ ಮೇಲೆ ಬರೆದಿರುವ ಭಾಷೆ ವಿಚಿತ್ರವಾಗಿದ್ದು, ಹಸ್ತಾಕ್ಷರವು ಸಹ ಇದೆ. ಇದರೊಂದಿಗೆ ಗೋಡೆಯ ಮೇಲೆ ಬೆರಳಚ್ಚು ಸಹ ಪತ್ತೆಯಾಗಿದೆ. ಇದಕ್ಕೂ ಕೆಲವು ದಿನಗಳ ಹಿಂದೆಯು ಸಹ ಮುಖ್ಯದ್ವಾರವನ್ನು ಯಾರೋ ಲಾಕ್ ಮಾಡಿದ್ದರಂತೆ. ಇದೀಗ ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಮನೆಯವರು ತೊಡುಪುಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ಬಗ್ಗೆ ಮಾತನಾಡಿರುವ ಇನ್ಸ್ಪೆಕ್ಟರ್ ಸುಧೀರ್ ಮನೋಹರ್, ಬೆದರಿಸಲೆಂದೇ ಇದನ್ನು ಕೆಲವರು ಮಾಡಿದ್ದಾರೆ. ಅಲ್ಲದೆ, ಪತ್ರದ ಮೇಲಿರುವುದು ರಕ್ತದ ಕಲೆಯಲ್ಲ ಎಂದು ಹೇಳಿದ್ದಾರೆ. ಮನೆಯ ಏರಿಯಾದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದು, ಈ ಸಂಬಂಧ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ.
ದೂರು ನೀಡಿದ ಬಳಿಕವು ಈವರೆಗೂ ಯಾವೊಬ್ಬ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದು ತನಿಖೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.