ಕೊಚ್ಚಿ: ತ್ರಿಪುಣಿತ್ತುರದಲ್ಲಿ ಶಬರಿಮಲೆ ಕರ್ಮಸಮಿತಿ ಹೆಸರಿನಲ್ಲಿ ನಕಲಿ ಪೆÇೀಸ್ಟರ್‍ಗಳು ನಿನ್ನೆ ಪ್ರತ್ಯಕ್ಷಗೊಂಡಿದ್ದವು. ಕ್ಷೇತ್ರದ ವಿವಿಧ ಭಾಗಗಳಲ್ಲಿ ಪೋಸ್ಟರ್ ಗಳು ಕಂಡುಬರುವುದರ ಹಿಂದೆ ಯುಡಿಎಫ್ ಇತ್ತು ಎಂದು ಆರೋಪಿಸಲಾಗಿದೆ. ಜನರು ಬಿಜೆಪಿಗೆ ಮತ ಹಾಕಬಾರದು ಮತ್ತು ಸಿಪಿಎಂ ನ್ನು ಗೆಲ್ಲಿಸಬಾರದು ಎಂದು ಹೇಳುವ ಪೋಸ್ಟರ್‍ಗಳನ್ನು ಕ್ಷೇತ್ರದಲ್ಲಿ ಶÀಬರಿಮಲೆ ಕ್ರಿಯಾ ಸಮಿತಿಯ ಹೆಸರಿನಲ್ಲಿ ವ್ಯಾಪಕವಾಗಿ ಅಂಟಿಸಲಾಗಿತ್ತು.
ಕರ್ಮ ಸಮಿತಿಯ ಹೆಸರಿನಲ್ಲಿ ನಕಲಿ ಪೋಸ್ಟರ್‍ಗಳ ವಿರುದ್ಧ ಚುನಾವಣಾ ಆಯೋಗ ಮತ್ತು ಡಿಜಿಪಿಗೆ ದೂರು ನೀಡಲಾಗಿದೆ ಎಂದು ಶಬರಿಮಲೆ ಕರ್ಮ ಸಮಿತಿ ಜನರಲ್ ಕನ್ವೀನರ್ ಎಸ್‍ಜೆಆರ್ ಕುಮಾರ್ ತಿಳಿಸಿದ್ದಾರೆ. ಏತನ್ಮಧ್ಯೆ, ಪೋಸ್ಟರ್ ಹಚ್ಚುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ.