HEALTH TIPS

ಕೋವಿಡ್ ರೋಗಿಗಳಿಗೆ ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ; ಆಮ್ಲಜನಕ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ..

      ನವದೆಹಲಿ: ದೇಶಾದ್ಯಂತ 2 ಅಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಮಟ್ಟವನ್ನು ಮೀರಿ ಪ್ರಸರಣವಾಗುತ್ತಿದೆ. 

     ತತ್ಪರಿಣಾಮವಾಗಿ ಆರೋಗ್ಯ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾಗಿದೆ. ಈ ಪರಿಸ್ಥಿತಿಯಲ್ಲಿ, ಆಸ್ಪತ್ರೆಗಳಿಗೆ ದಾಖಲಾಗುವ ಅನಿವಾರ್ಯತೆಯನ್ನು ಸಾಧ್ಯವಾದಷ್ಟೂ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಕ ಹಂತದ ಕೋವಿಡ್-19  ಸೋಂಕು ಇರುವ ರೋಗಿಗಳಿಗೆ ಚಿಕಿತ್ಸೆ, ಸ್ವಯಂ ಆರೈಕೆ ವಿಧಾನ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

     ಕೇಂದ್ರ ಆರೋಗ್ಯ ಸಚಿವಾಲಯ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, "ಸ್ವಯಂ ಆರೈಕೆಗಾಗಿ ಪ್ರೋನಿಂಗ್" ವಿಧಾನವನ್ನು ಅನುಸರಿಸಲು ಸಲಹೆ ನೀಡಿದ್ದು, ಐಸೊಲೇಷನ್ ನಲ್ಲಿರುವ ರೋಗಿಗಳು ಈ ವಿಧಾನವನ್ನು ಅನುಸರಿಸಬಹುದೆಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

       ಪ್ರೋನಿಂಗ್ ವಿಧಾನ ಅನುಸರಿಸುವುದು ಹೇಗೆ?

     ಪ್ರೋನಿಂಗ್ ಚಿಕಿತ್ಸಾ ವಿಧಾನದಲ್ಲಿ ರೋಗಿಗಳನ್ನು, ಮೇಲ್ಕಂಡ ಚಿತ್ರದಲ್ಲಿ ತೋರಿಸಿರುವಂತೆ ಹೊಟ್ಟೆ ಕೆಳಭಾಗಕ್ಕೆ ಬರುವ ಭಂಗಿಯಲ್ಲಿ ಮಲಗಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಹೆಚ್ಚಿನ ಪ್ರಮಾಣದಲ್ಲಿ ತಲುಪುತ್ತದೆ. ದಿನವೊಂದಕ್ಕೆ ಒಟ್ಟು 16-18 ಗಂಟೆಗಳ ಕಾಲ ಈ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ.

     ಪ್ರೋನಿಂಗ್ ನಿಂದ ಸುಗಮ ಉಸಿರಾಟ, ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಕೆ ಸುಧಾರಣೆ ಸಾಧ್ಯವಾಗಲಿದೆ. ಮನೆಯಲ್ಲಿಯೇ ಐಸೊಲೇಷನ್ ಗೆ ಒಳಗಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಕೋವಿಡ್-19 ರೋಗಿಗಳಿಗೆ ಇದು ಅತ್ಯುತ್ತಮವಾದ ಚೇತರಿಕೆ ವಿಧಾನವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

     ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಕೋವಿಡ್-19 ರೋಗಿಗಳು ಹಾಗೂ ಪಲ್ಸ್ ಆಕ್ಸಾ ಮೀಟರ್ ನಲ್ಲಿ SpO2 (ಆಮ್ಲಜನಕ ಪೂರೈಕೆ ಪ್ರಮಾಣ) 94 ಕ್ಕಿಂತಲೂ ಕಡಿಮೆ ಬರುವ ವ್ಯಕ್ತಿಗಳಿಗೆ, ರಕ್ತದ ಒತ್ತಡ, ಬ್ಲಡ್ ಶುಗರ್ ವ್ಯತ್ಯಯ, ತಾಪಮಾನ ಹೆಚ್ಚಾಗಿರುವ ರೋಗಿಗಳಿಗೆ ಮಾತ್ರ ಪ್ರೋನಿಂಗ್ ವಿಧಾನವನ್ನು ಸಲಹೆ ನೀಡಲಾಗಿದೆ. 

    ಸಮಯಕ್ಕೆ ಸರಿಯಾಗಿ ಪ್ರೋನಿಂಗ್ ವಿಧಾನವನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹುದಾಗಿದೆ ಎನ್ನುತ್ತದೆ ಆರೋಗ್ಯ ಸಚಿವಾಲಯ. 

    ಆದರೆ ಊಟ ಮಾಡಿದ ಕೆಲವು ಗಂಟೆಗಳ ನಂತರ, ಕಿರಿಕಿರಿಯಾಗದೇ ಇರುವವರೆಗೆ ಮಾತ್ರ ಪ್ರೋನಿಂಗ್ ನ್ನು ಅಭ್ಯಾಸ ಮಾಡಲು ಸಚಿವಾಲಯ ಸಲಹೆ ನೀಡಿದ್ದು ಗರ್ಭಿಣಿಯರು, ಹೃದಯ ಸಮಸ್ಯೆ ಇರುವವರು, ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಿಸುತ್ತಿರುವವರು, ಅಸ್ಥಿರವಾದ ಬೆನ್ನುಮೂಳೆಯ ಎಲುಬಿನ ಸಮಸ್ಯೆ ಇರುವವರು ಪೆಲ್ವಿಕ್ ಫ್ರಾಕ್ಚರ್ ಗಳ ಸಮಸ್ಯೆ ಇರುವವರು ಈ ವಿಧಾನವನ್ನು ಅನುಸರಿಸಬಾರದು ಎಂದು ಕಟ್ಟುನಿಟ್ಟಾಗಿ ಆರೋಗ್ಯ ಸಚಿವಾಲಯ ಸೂಚಿಸಿದೆ. 

    ಇದೇ ವೇಳೆ ವೈದ್ಯಕೀಯ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿರುವ ಆರೋಗ್ಯ ಸಚಿವಾಲಯ, ತೀವ್ರವಾದ ರೋಗ ಇದ್ದರೆ ಮಾತ್ರ ತುರ್ತು ಬಳಕೆ ಅನುಮತಿಯ ಆಧಾರದಲ್ಲಿ ಐಸಿಯುಗೆ ದಾಖಲಾದ ಅಥವಾ ರೋಗ ತೀವ್ರಗೊಂಡ 24-48 ಗಂಟೆಗಳಲ್ಲಿ ಟೋಸಿಲಿಜುಮಾಬ್ ಔಷಧವನ್ನು ನೀಡುವುದಕ್ಕೆ ಸಚಿವಾಲಯ ಸಲಹೆ ನೀಡಿದೆ. 

    ಸ್ಟಿರಾಯ್ಡ್ ಗಳನ್ನು ನೀಡಿದರೂ ಚೇತರಿಕೆ ಕಾಣದ, ಉರಿಯೂತ ಗಣನೀಯವಾಗಿ ಹೆಚ್ಚಳವಾದಂತಹ ರೋಗಿಗಳಿಗೆ ಮಾತ್ರ ಟೋಸಿಲಿಜುಮಾಬ್ ಔಷಧ ನೀಡುವುದನ್ನು ಪರಿಗಣಿಸಬೇಕು, ಪ್ಲಾಸ್ಮಾ ವಿಧಾನವನ್ನು ಪ್ರಾರಂಭಿಕ ಹಂತದಲ್ಲಿ, ರೋಗಲಕ್ಷಣಗಳು ಕಾಣಿಸಿಕೊಂಡ 7 ದಿನಗಳಲ್ಲಿ, ಹೆಚ್ಚಿನ ಟೈಟರ್ಸ್ ಪ್ಲಾಸ್ಮಾ ದಾನಿಗಳ ಲಭ್ಯತೆ ಇದ್ದಲ್ಲಿ ಮಾತ್ರ ಅನುಸರಿಸಬೇಕೆಂದು ಸಚಿವಾಲಯ ಹೇಳಿದೆ. 

     ರೆಮ್ಡಿಸಿವಿರ್ ಔಷಧವನ್ನು ಮಧ್ಯಮ, ತೀವ್ರ ಕೋವಿಡ್-19 ರೋಗಲಕ್ಷಣಗಳಿದ್ದು, ಪೂರಕ ಆಮ್ಲಜನಕದ ಅಗತ್ಯವಿರುವ, ರೋಗ ಲಕ್ಷಣಗಳು ಕಾಣಿಸಿಕೊಂಡ 10 ದಿನಗಳಲ್ಲಿ ನೀಡಬೇಕೆಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಮೂತ್ರಪಿಂಡದ ದುರ್ಬಲತೆ ಅಥವಾ ಯಕೃತ್ತಿನ ಅಪಸಾಮಾನ್ಯ ಕ್ರಿಯೆ ಎದುರಿಸುತ್ತಿರುವವರಿಗೆ ರೆಮ್ಡಿಸಿವಿರ್ ಬಳಕೆಯನ್ನು ಶಿಫಾರಸು ಮಾಡಿಲ್ಲ ಎಂದು ಸಚಿವಾಲಯ ಹೇಳಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries