ಕೊಚ್ಚಿ: ಬಿ.ಎಸ್.ಎನ್.ಎಲ್. ತನ್ನ ಗ್ರಾಹಕರಿಂದ ತಮ್ಮ ಮೊಬೈಲ್ ಸಂಪರ್ಕ ಕೆವೈಸಿ ಮಾಹಿತಿಯನ್ನು ಕೇಳುವ ನಕಲಿ ಎಸ್‍ಎಂಎಸ್ ಸಂದೇಶಗಳನ್ನು ಸ್ವೀಕರಿಸುತ್ತಿರುವುದನ್ನು ಗಮನಿಸಿದ್ದು, ಮಾಹಿತಿ ನೀಡದಿದ್ದರೆ ಸಂಪರ್ಕ ಕಡಿತಗೊಳ್ಳುತ್ತದೆ. CP-SMSFS, AD-VIRINF, CP-BLMKND,BP-ITLINN, 8582909398 ನಂತಹ ವಿವಿಧ ಎಸ್‍ಎಂಎಸ್ ಶೀರ್ಷಿಕೆಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ಎಸ್‍ಎಂಎಸ್‍ನಲ್ಲಿ ನಮೂದಿಸಲಾದ ಸಂಖ್ಯೆಗೆ ಮರಳಿ ಕರೆದರೆ ಬಿಎಸ್‍ಎನ್‍ಎಲ್ ಕೆವೈಸಿ ವಿಭಾಗ ಎಂದು ಹೇಳಲ್ಪಡುವ ನಂಬ್ರಕ್ಕೆ ಮರು ಕರೆಮಾಡಿದರೆ ಬಿಎಸ್‍ಎನ್‍ಎಲ್ ಕೆವೈಸಿ ವಿಭಾಗಕ್ಕೆ ಸಂಪರ್ಕಿಸಿ ಎಂಬ ಸಂದೇಶಗಳು ಲಭಿಸುತ್ತಿದ್ದು ಇಂತಹ ಸಂದೇಶಕ್ಕೂ ಬಿಎಸ್.ಎನ್.ಎಲ್ ಗೂ ಯಾವುದೇ ಸಂಬಂಧವಿಲ್ಲ ಎಂದು ಕಂಪನಿ ಎಚ್ಚರಿಸಿದೆ. ಈ ರೀತಿಯಾಗಿ ಅವರು ಸಂಗ್ರಹಿಸುವ ಕೆವೈಸಿ ಮಾಹಿತಿಯನ್ನು ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳುವುದು ಸೇರಿದಂತೆ ವಂಚನೆಗಳನ್ನು ಮಾಡಲು ಬಳಸಲಾಗುತ್ತದೆ.
ಬಿ.ಎಸ್.ಎನ್.ಎಲ್ ನಿಂದ ಯಾವುದೇ ಎಸ್.ಎಂ.ಎಸ್ ಸಂದೇಶಗಳನ್ನು ಕಳುಹಿಸುವುದಿಲ್ಲ. ಇಂತಹ ನಕಲಿ ಸಂದೇಶಗಳ ವಿರುದ್ಧ ಗ್ರಾಹಕರು ಜಾಗರೂಕರಾಗಿರಬೇಕು ಮತ್ತು ಅವರ ಮಾಹಿತಿಯನ್ನು ರವಾನಿಸದಂತೆ ಬಹಳ ಜಾಗರೂಕರಾಗಿರಬೇಕು. ಪ್ಲೇ ಸ್ಟೋರ್‍ನಲ್ಲಿ ಕೆವೈಸಿಯನ್ನು ನವೀಕರಿಸಲು ಬಿಎಸ್‍ಎನ್‍ಎಲ್ ಯಾವುದೇ ಹೊಸ ಆಪ್ ನ್ನು ಅಭಿವೃದ್ಧಿಪಡಿಸಿಲ್ಲ ಎಂದು ಬಿಎಸ್‍ಎನ್‍ಎಲ್ ಕೇರಳ ಸರ್ಕಲ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಮೊಲ್ಲಿ ಜೋಸೆಫ್ ಹೇಳಿದ್ದಾರೆ.
ಬಿ.ಎಸ್.ಎನ್.ಎಲ್ ಕೆವೈಸಿಗೆ ಸಂಬಂಧಿಸಿದ ಎಲ್ಲವನ್ನೂ ಬಿ.ಎಸ್.ಎನ.ಎಲ್ ಗ್ರಾಹಕ ಸೇವಾ ಕೇಂದ್ರದ ಮೂಲಕ ಮಾತ್ರ ಮಾಡಲಾಗುತ್ತದೆ. 1503 ಅಥವಾ 1500 ಗೆ ಕರೆ ಮಾಡಿ ಯಾವುದೇ ಪ್ರಶ್ನೆಗಳನ್ನು ಕೇಳಬಹುದು. ಇದನ್ನು pgcellkerala@bsnl.co.in ಗೆ ಇಮೇಲ್ ಮಾಡಬಹುದೆಂದು ಕಂಪನಿಯು ಎಚ್ಚರಿಸಿದೆ.