ಮಲಪ್ಪುರಂ: ಮಲಪ್ಪುರಂ ಜಿಲ್ಲೆಯಲ್ಲಿ ಆರಾಧನಾಲಯಗಳಿಗೆ ಕೇವಲ ಐವರಿಗೆ ಮಾತ್ರ ಪ್ರವೇಶವನ್ನು ನಿರ್ಬಂಧಿಸಿದ್ದ ಆದೇಶವನ್ನು ಜಿಲ್ಲಾಧಿಕಾರಿ ಪರಿಶೀಲಿಸುವ ನಿರ್ಧಾರದ ವಿರುದ್ಧ ಚಿತ್ರನಟಿ ಪಾರ್ವತಿ ತಿರುಪೊತ್ ವಿರೊಧ ವ್ಯಕ್ತಪಡಿಸಿದ್ದಾರೆ. ಮಾನವರ ಜೀವಗಳನ್ನು ಉಳಿಸುವ ಕರ್ತವ್ಯದಿಂದ ಯಾವುದೇ ಧಾರ್ಮಿಕ ಸಮುದಾಯವನ್ನು ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ಪಾರ್ವತಿ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ಅವರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.
ಆರಾಧನಾಲಯಗಳಿಗೆ ಪ್ರವೇಶದ ಕುರಿತು ಅಂತಿಮ ತೀರ್ಮಾನವನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಮಲಪ್ಪುರಂ ಜಿಲ್ಲಾಧಿಕಾರಿ ಗೋಪಾಲಕೃಷ್ಣನ್ ಮಾಹಿತಿ ನೀಡಿದ್ದರು. ವಿವಿಧ ಧಾರ್ಮಿಕ ಮುಖಂಡರ ಒತ್ತಡದಿಂದಾಗಿ ಆದೇಶವನ್ನು ಪರಿಶೀಲಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಲಿದೆ. ಈ ಹಿಂದೆ ನೀಡಲಾಗಿದ್ದ ಪ್ರಬಲ ನಿಯಂತ್ರಣದ ಆದೇಶವನ್ನು ಪುನರ್ ಪರಿಶೀಲನೆ ನಡೆಸಲಾಗುವುದೆಂಬ ಡಿ.ಸಿ.ಯ ನಿರ್ಧಾರದ ವಿರುದ್ಧ ಪಾರ್ವತಿ ಕಿಡಿ ಕಾರಿದ್ದಾರೆ.
ಯಾವುದೇ ಧಾರ್ಮಿಕ ಸಮುದಾಯವು ಮಾನವರಂತೆ ಜೀವಗಳನ್ನು ಉಳಿಸುವ ಅವರ ಶಿಷ್ಟಾಚಾರ ಮತ್ತು ಕರ್ತವ್ಯದಿಂದ ವಿನಾಯಿತಿ ಪಡೆಯುವುದಿಲ್ಲ. ಪ್ರಸ್ತುತ ಕೊರೊನಾದ ಎರಡನೇ ಅಲೆ ಕಳವಳಕಾರಿಯಾಗಿದೆ. ಮುಖ್ಯಮಂತ್ರಿಯವರೊಂದಿಗೆ ಜಿಲ್ಲಾಧಿಕಾರಿ ಭೇಟಿಯಾದ ಬಳಿಕ ನೂರಾರು ಜನರಿಗೆ ಆರಾಧನಾಲಯಗಳಿಗೆ ಪ್ರವೇಶ ನೀಡುವುದನ್ನು ನಿಯಂತ್ರಿಸುವ ಹಿಂದಿನ ನಿರ್ಧಾರವನ್ನು ಕಲೆಕ್ಟರ್ ಅನುಮೋದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ದಯವಿಟ್ಟು ಸರಿಯಾದ ಕೆಲಸ ಮಾಡಿ ಎಂದು ಪಾರ್ವತಿ ವಿರೋಧ ವ್ಯಕ್ತಪಡಿಸಿದ್ದಾರೆ.