ನವದೆಹಲಿ: ಭಾರತ್ ಬಯೋಟೆಕ್ ಕಂಪನಿಯ 'ಕೋವಾಕ್ಸಿನ್' ಲಸಿಕೆಯ ಮೂರನೇ ಡೋಸೇಜ್ ಅನ್ನು ಕೆಲವು ಸ್ವಯಂ ಸೇವಕರಿಗೆ ಪ್ರಾಯೋಗಿಕವಾಗಿ ನೀಡಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ತಜ್ಞರ ಸಮಿತಿ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತ್ ಬಯೋಟೆಕ್ ಕಂಪನಿಯವರು, ಈಗಾಗಲೇ ಎರಡನೇ ಡೋಸ್ ಪಡೆದಿರುವ ಸ್ವಯಂ ಸೇವಕರಿಗೆ ಆರು ತಿಂಗಳ ನಂತರ ಬೂಸ್ಟರ್ ಡೋಸ್ ನೀಡುವುದಕ್ಕೆ ಮಾಡಿಕೊಂಡಿರುವ ಅಗತ್ಯ ಸಿದ್ಧತೆಗಳ ಬಗ್ಗೆ ಡಿಸಿಜಿಐ ವಿಷಯ ತಜ್ಞರ ಸಮಿತಿ ಎದುರು ಮಂಡಿಸಿದರು.
'ಮೂರನೇ ಡೋಸ್ ಪಡೆದ ಸ್ವಯಂ ಸೇವಕರ ಆರೋಗ್ಯ ಕುರಿತ ಮಾಹಿತಿಯನ್ನು ಸಮಿತಿಗೆ ಸಲ್ಲಿಸಬೇಕು' ಎಂದು ಡಿಸಿಜಿಐ ತಜ್ಞರ ಸಮಿತಿ ಕಂಪನಿಗೆ ತಿಳಿಸಿದೆ.