ಕಾಸರಗೋಡು: ಮುಳಿಯಾರು ಗ್ರಾಮದ ಇರಿಯಣ್ಣಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಿ.ಕೃಷ್ಣನ್ ಮಣಿಯಾಣಿ ಎಂಬವರ ಪುತ್ರ ಎನ್.ಕೆ.ಮನೀಷ್ ಅವರು 2019 ಜೂ.29ರಿಂದ ಕಾಣೆಯಾಗಿದ್ದಾರೆ. ಇವರ ಪತ್ನಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಆದೂರು ಪೆÇಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಮನೀಷ್ ಅವರು ಬಿಳಿ ಬಣ್ಣದವರಾಗಿದ್ದು, 170 ಸೆ.ಮೀ. ಉದ್ದವಿದ್ದಾರೆ. ಕಾಣೆಯಾದ ವೇಳೆ ಅವರಿಗೆ 35 ವರ್ಷ ವಯಸ್ಸಾಗಿದೆ. ಇವರ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ಆದೂರು ಪೆÇಲೀಸರಿಗೆ (ದೂರವಾಣಿ ಸಂಖ್ಯೆಗಳು: 04994-260024, 9497980913, 949798219.) ಮಾಹಿತಿ ನೀಡಬೇಕು.