ಉಪ್ಪಳ: ಸನಾತನ ಧರ್ಮ ಸೇವಾ ಟ್ರಸ್ಟ್ ಬಾಯಾರು ಇದರ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ವಷರ್ಂಪ್ರತಿ ವಿಷು ದಿನ ನಡೆಯುವ ಶ್ರೀ ಸೂಕ್ತ ಹವನವು ಬಡಾಜೆ ವಲ್ಲೀಶ ಚಕ್ಕೇರಾಯ ಹಾಗೂ ವೇದವ್ಯಾಸ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆಯಿತು.
ಟ್ರಸ್ಟ್ ವತಿಯಿಂದ ಸಮಾಜಮುಖಿ ಸೇವೆಯಾಗಿ ಆರ್ಥಿಕ ನೆರವನ್ನು ಅಜಯ್ ರಾಜ್ ಬೊಳ್ಳಾರ್ ಹಾಗೂ ರಾಧಾಕೃಷ್ಣ ಬಳ್ಳೂರು ಇವರಿಗೆ ಈ ಸಂದರ್ಭ ನೀಡಲಾಯಿತು. ಸೇವಾ ಟ್ರಸ್ಟಿಗಳಾದ ಮಂಜುನಾಥ ಶೆಟ್ಟಿ ಕಟ್ನಬೆಟ್ಟು, ಲಕ್ಷ್ಮೀಶ ರೈ ಪಟ್ಲಗುತ್ತು,ಸಂದೀಪ್ ರೈ ನೀರ್ಚಾಲ್, ದೇವಸ್ಥಾನದ ಟ್ರಸ್ಟಿಗಳಾದ ರವಿಶಂಕರ್ ಭಟ್, ರಾಧಾಕೃಷ್ಣ ಭಟ್ ಹಾಗೂ ರಾಜಕೀಯ ಸಾಮಾಜಿಕ ನೇತಾರರಾದ ಸದಾನಂದ ಶೆಟ್ಟಿ ಕೊಮ್ಮಂಡ, ಲೋಕೇಶ ನೋಂಡ ಕಯ್ಯಾರು, ವೇಣುಗೋಪಾಲ ನಾಯಕ್ ಚಿಪ್ಪಾರು ಉಪಸ್ಥಿತರಿದ್ದರು.