ಕಣ್ಣೂರು: ಯೂತ್ ಲೀಗ್ ಕಾರ್ಯಕರ್ತ ಮನ್ಸೂರ್ ಹತ್ಯೆಯ ಬಳಿಕ ಘರ್ಷಣೆಗಳು ಬುಗಿಲೆದ್ದಿತು. ಸಿಪಿಎಂ ಕಚೇರಿಗಳು ಮತ್ತು ಸಿಪಿಎಂ ಬೆಂಬಲಿಗರ ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು. ಶಾಖಾ ಸಮಿತಿ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಪೆರಿಂಗತ್ತೂರು ಪಟ್ಟಣ ಮತ್ತು ಅಚ್ ಮೂಕ್ ಶಾಖಾ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಪೆರಿಂಗತ್ತೂರು ಸಿಪಿಎಂ ಸ್ಥಳೀಯ ಸಮಿತಿ ಕಚೇರಿಯ ಮೇಲೂ ದಾಳಿ ನಡೆಸಲಾಯಿತು.
ಮನ್ಸೂರ್ ನ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹದ ಅಂತಿಮ ಯಾತ್ರೆ ನಡೆಯಿತು. ಸಂಜೆ 6.30 ರಿಂದ 7.30 ರವರೆಗೆ ಮನ್ಸೂರ್ ಅವರ ಶವವನ್ನು ಪೆರಿಂಗತ್ತೂರು ಪಟ್ಟಣದಲ್ಲಿ ಒಂದು ಗಂಟೆ ಇಡಲಾಯಿತು. ಶವಸಂಸ್ಕಾರಕ್ಕಾಗಿ ಶವಗಳನ್ನು ಹೊತ್ತ ಅಂತಿಮ ಯಾತ್ರೆ ಹಾದುಹೋದ ಬಳಿಕ ಏಕಾಏಕಿ ಯೂತ್ ಲೀಗ್ ಕಾರ್ಯಕರ್ತರು ಹಿಂಸಾಚಾರಕ್ಕಿಳಿದರು.
ಕಣ್ಣೂರಿನ ಕೂತುಪರಂಬು ಪುಲ್ಲುಕ್ಕರ ಮುಕಿಲ್ಪೀಡಿಕಾದಲ್ಲಿ ನಡೆದ ಮತದಾನದ ಬಳಿಕ ದಾಳಿಯಲ್ಲಿ ಯೂತ್ ಲೀಗ್ ಕಾರ್ಯಕರ್ತ ಮನ್ಸೂರ್ (22) ಎಂಬಾತನನ್ನು ಮೊನ್ನೆ ಇರಿದು ಕೊಲೆ ಮಾಡಲಾಗಿತ್ತು. ಮತದಾನದ ದಿನ ಪೋಲೀಸ್ ಠಾಣೆ ಎದುರು ಮಧ್ಯಾಹ್ನ ಬಾಂಬರ್ ದಾಳಿಯೂ ನಡೆದಿತ್ತು. ದಾಳಿಯಲ್ಲಿ ಅವರ ಸಹೋದರ ಮುಹ್ಸಿನ್ (27) ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಮನ್ಸೂರ್ ತನ್ನ ಸಹೋದರನ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಪ್ರಯತ್ನಿಸುತ್ತಿದ್ದಾಗ ಅವನನ್ನು ಹತ್ಯೆ ಮಾಡಲಾಗಿದೆ.