ಕಾಸರಗೋಡು: ವಿಧಾನಸಭೆ ಚುನಾವಣೆಯ ಮತಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲಾಗಿರುವ ಕಾಸರಗೋಡು ಜಿಲ್ಲೆಯ ಸ್ಟ್ರಾಂಗ್ ರೂಮ್‍ಗಳಿಗೆ ಹೆಚ್ಚುವರಿ ಸಿ.ಇ.ಒ ಸಂಜಯ್ ಕೌಲ್ ಅವರು ಸೋಮವಾರ ಭೇಟಿ ನೀಡಿದರು.
ಸ್ಟ್ರಾಂಗ್ ರೂಂ ಗಳ ಸಂರಕ್ಷಣೆ ಖಚಿತಪಡಿಸುವ ಅಂಗವಾಗಿ ಅವರು ಕಾಸರಗೋಡು ಸರ್ಕಾರಿ ಕಾಲೇಜು(ಕಾಸರಗೋಡು ವಿಧಾನಸಭೆ ಕ್ಷೇತ್ರ), ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಸಾಲೆ( ಮಂಜೇಶ್ವರ ವಿಧಾನಸಭೆ ಕ್ಷೇತ್ರ), ಪೆರಿಯಪಾಲಿಟೆಕ್ನಿಕ್ ಕಾಲೇಜು( ಉದುಮಾ ವಿಧಾನಸಭೆ ಕ್ಷೇತ್ರ), ಪಡನ್ನಕ್ಕಾಡ್ ನೆಹರೂ ಕಾಲೇಜು(ತ್ರಿಕರಿಪುರ ವಿಧಾನಸಭೆ ಕ್ಷೇತ್ರ) ಗಳ ಸ್ಟ್ರಾಂಗ್ ರೂಂ ಗಳಿಗೆ ಅವರು ಸಂದರ್ಶನ ನೀಡಿದರು. ವಿದ್ಯುನ್ಮಾನ ಮತಯಂತ್ರಗಳು, ಅಂಚೆ ಬಾಲೆಟ್ ಗಳು ಇತ್ಯಾದಿಗಳನ್ನು ಇಲ್ಲಿ ಸಂರಕ್ಷಣೆಯಲ್ಲಿ ಇರಿಸಲಾಗಿದೆ. ಮತಗಣನೆ ಸಂಬಂಧ ಸಿದ್ಧತೆಗಳನ್ನೂ ಅವರು ಅವಲೋಕನ ನಡೆಸಿ, ಅಗತ್ಯದ ಸಲಹೆ, ಸೂಚನೆಗಳನ್ನು ನೀಡಿದರು. ಹೆಚ್ಚುವರಿ ದಂಡನಧಿಕಾರಿ ಅತುಲ್ ಎಸ್.ನಾಥ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿಸೈಮನ್ ಫೆರನಾಂಡಿಸ್, ವಿಧಾನಸಭೆ ಕ್ಷೇತ್ರಗಳ ಚುನಾವಣೆ ಅಧಿಕಾರಿಗಳು ಜತೆಗಿದ್ದರು.
ಸಂದರ್ಶನಕ್ಕೆ ಮೊದಲು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆ ಅಧಿಕಾರಿಗಳ ಜತೆ ಸಭೆ ನಡೆಸಿದರು. ಅಂಚೆ ಮತದಾನಕ್ಕಿರುವ 12 ಡಿ, 12 ಫಾರಂಗಳ ನಿಖರ ಎಣಿಕೆ ಕಾಯ್ದಿರಿಸುವಂತೆ ಸಂಜಯ್ ಕೌಲ್ ಅವರು ಆದೇಶಿಸಿದರು. ಮತ ಎಣಿಕೆ ಸಿಬ್ಬಂದಿಗೆ ಅಗತ್ಯದ ತರಬೇತಿ ನೀಡುವಂತೆ ಅವರು ತಿಳಿಸಿದರು.