ತಿರುವನಂತಪುರ: ರಾಜ್ಯದಲ್ಲಿ ಲಾಕ್ ಡೌನ್ ಅನುಷ್ಠಾನದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ ತೀವ್ರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಗಳು ಅಗತ್ಯವಾಗಬಹುದು. ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಬ್ಯಾಂಕಿಂಗ್ ಸೇವೆ ಪ್ರಸ್ತುತ ಮಧ್ಯಾಹ್ನ 2 ರವರೆಗೆ ಇರಲಿದೆ. ಗರಿಷ್ಠ ಆನ್‍ಲೈನ್ ಬ್ಯಾಂಕಿಂಗ್ ನ್ನು ಪೆÇ್ರೀತ್ಸಾಹಿಸಬೇಕು ಎಂದು ಸಿಎಂ ಹೇಳಿದರು.
ಕೇರಳದಲ್ಲಿ ಕೋವಿಡ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಮೂರು ಲಕ್ಷ ದಾಟಿದೆ. ಇದರ ಜೊತೆಗೆ ನಕಲಿ ಸಂದೇಶಗಳನ್ನು ಹರಡುವಿಕೆ ಆತಂಕಕಾರಿಯಾಗಿದೆ ಎಂದು ಸಿಎಂ ಹೇಳಿದರು. ಅಂತಹ ಸಂದೇಶಗಳನ್ನು ಹರಡುವ ಮತ್ತು ಸಿದ್ಧಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ಡಬಲ್ ಮಾಸ್ಕ್ ವ್ಯವಸ್ಥೆ ಮುಖ್ಯವಾಗಿದೆ. ಡಬಲ್ ಮಾಸ್ಕ್ ಎಂದರೆ ಶಸ್ತ್ರಚಿಕಿತ್ಸೆಯ ಮಾಸ್ಕ್ ಮತ್ತು ಬಟ್ಟೆಯ ಮಾಸ್ಕ್ ಗಳ ಸಂಯೋಜನೆಯಾಗಿರಬೇಕು. ಅನಗತ್ಯ ಭಯಕ್ಕೆ ಗುರಿಯಾಗದೆ ಸಮಾಜಿಕವಾಗಿ ಜನರು ನಿಲುವು ತೆಗೆದುಕೊಳ್ಳಬೇಕಾಗಿದೆ.
ಸ್ಥಳೀಯ ಸಂಸ್ಥೆಗಳು ಲಾಕ್‍ಡೌನ್ ಘೋಷಿಸಬಾರದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳಿಗೆ ಮಾತ್ರ ಅಂತಹ ಸ್ವಾತಂತ್ರ್ಯವಿರಲಿದೆ. ಇದನ್ನು ಸ್ಟೇಷನ್ ಹೌಸ್ ಅಧಿಕಾರಿ ನಿಯಂತ್ರಿಸಬೇಕು. ಪತ್ತನಂತಿಟ್ಟು ಜಿಲ್ಲೆಯಲ್ಲಿ ಆಮ್ಲಜನಕದ ಕೊರತೆಯನ್ನು ಪರಿಹರಿಸಲಾಗಿದೆ. ತಮ್ಮ ಮನೆಗಳಲ್ಲಿ ಕ್ವಾರಂಟೈನ್ ಗೊಳಗಾದವರು ಸ್ವ É್ರಪ್ರೇರಣೆಯಿಂದ ಅಧಿಕಾರಿಗಳಿಗೆ ತಿಳಿಸಬೇಕು. ಹಾಗೆ ಮಾಡಲು ತೊಂದರೆ ಇರುವವರು 112 ಅಥವಾ ಹತ್ತಿರದ ಪೋಲೀಸ್ ಠಾಣೆಗೆ ಕರೆ ಮಾಡಬೇಕು. ಕಟ್ಟುನಿಟ್ಟಾದ ನಿಬರ್ಂಧಗಳೊಂದಿಗೆ ಶನಿವಾರ ಮತ್ತು ಭಾನುವಾರ ಮನೆಯಿಂದ ಆಚೆಗೆ ತೆರಳುವುದನ್ನು ಕಡಿಮೆ ಮಾಡಬೇಕು.
ಮಾರುಕಟ್ಟೆ ಸಮಿತಿಗಳು ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಮುಚ್ಚಿ ಸಮಯಕ್ಕೆ ಸರಿಯಾಗಿ ತೆರೆಯುವಂತೆ ನೋಡಿಕೊಳ್ಳಬೇಕು. ಪೋಲೀಸರು ಇದನ್ನು ಖಚಿತಪಡಿಸಿಕೊಳ್ಳಬೇಕು. ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಪ್ರಯಾಣಿಸುವುದು ಸೂಕ್ತ. ನೀವು ಒಂದೇ ಕುಟುಂಬದ ಸದಸ್ಯರಾಗಿದ್ದರೆ, ಮಾಸ್ಕ್ ಧರಿಸಿ ಪ್ರಯಾಣಿಸಬಹುದು. ರಾಜ್ಯ ಮಟ್ಟದಲ್ಲಿ ಆಕ್ಸಿಜನ್ ವಾರ್ ರೂಂ ಸ್ಥಾಪಿಸಲಾಗುವುದು ಎಂದೂ ಸಿಎಂ ಹೇಳಿದರು.