ನವದೆಹಲಿ: ವಿಧಾನಸಭಾ ಚುನಾವಣೆ, ವಿವಿಧ ಲೋಕಸಭೆ ಉಪಚುನಾವಣೆ ನಡೆದ ರಾಜ್ಯಗಳಲ್ಲಿ ಮತ ಎಣಿಕೆ ದಿನದಂದು ಮತ ಎಣಿಕೆಗೆ ಮೊದಲು ಅಥವಾ ನಂತರ ಎಲ್ಲಾ ಬಗೆಯ ವಿಜಯೋತ್ಸವಗಳನ್ನು ನಿಷೇಧಿಸಿ ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ.
ಕೊರೋನಾವೈರಸ್ ಹರಡುವಿಕೆ ತಪ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇ 2 ರಂದು ಕರ್ನಾಟಕದ ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಸೇರಿದಂತೆ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಯ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.