ತಿರುವನಂತಪುರ: ಆತಂಕ ಮತ್ತು ಅನಿಶ್ಚಿತತೆಗಳ ನಡುವೆ ಎಸ್‍ಎಸ್‍ಎಲ್‍ಸಿ- ಹೈಯರ್ ಸೆಕೆಂಡರಿ ಪರೀಕ್ಷೆಗಳು ರಾಜ್ಯಾದ್ಯಂತ ಇಂದು ಪ್ರಾರಂಭಗೊಂಡಿತು. ಆನ್‍ಲೈನ್ ತರಗತಿಗಳ ಮೂಲಕ ಅಧ್ಯಯನ ಮಾಡಿದ ಮೊದಲ ತಂಡ ಈ ಮೂಲಕ ಇಂದಿನಿಂದ ಐತಿಹಾಸಿಕ ಪರೀಕ್ಷೆಗಳನ್ನು ಬರೆಯುವರು ಎಂಬುದು ವಿಶೇಷತೆಯಾಗಿದೆ.
ಕೊರೋನಾ ಮಾನದಂಡಗಳ ಸಂಪೂರ್ಣ ಅನುಸರಣೆಯಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು. ಹ್ಯಾಂಡ್ ಸ್ಯಾನಿಟೈಜರ್ ನ್ನು ಕೈಯಲ್ಲಿ ಇರಿಸಿಕೊಂಡಿರಬೇಕು ಮತ್ತು ಈ ಬಗ್ಗೆ ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಥರ್ಮಲ್ ಸ್ಕ್ಯಾನಿಂಗ್ ನಂತರ ಎಲ್ಲಾ ವಿದ್ಯಾರ್ಥಿಗಳನ್ನು ತರಗತಿಗೆ ಬಿಡಲಾಯಿತು. ಒಂದು ಪರೀಕ್ಷಾ ಕೊಠಡಿಯಲ್ಲಿ 20 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಕೊರೋನಾ ಕಾಳಜಿಗಳ ಹೊರತಾಗಿಯೂ, ವಿದ್ಯಾರ್ಥಿಗಳು ಸಂಪೂರ್ಣ ವಿಶ್ವಾಸದಲ್ಲಿ ಮೊದಲ ದಿನ ಪರೀಕ್ಷೆ ಬರೆದರು.
ಕೊರೋನಾ ಮುನ್ನೆಚ್ಚರಿಕೆಯ ಭಾಗವಾಗಿ ಶಿಕ್ಷಕರ ಮತ್ತು ಪೋಷಕರ ಸಮಿತಿಯು ಸಕ್ರಿಯವಾಗಿದೆ. ಕೊರೋನಾ ರೋಗಲಕ್ಷಣ ಹೊಂದಿರುವ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷಾ ಕೊಠಡಿಗಳನ್ನು ಸಹ ಸ್ಥಾಪಿಸಲಾಗಿದೆ.