ವಯನಾಡ್: ಕೊರೋನಾ ಸೋಂಕಿನಿಂದ ವಯನಾಡ್ ಮಾನಂದವಾಡಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತೆಯೋರ್ವೆ ಮೃತಪಟ್ಟಿದ್ದಾರೆ. ಜಿಲ್ಲಾ ಆಸ್ಪತ್ರೆ ಟಿ.ಬಿ. ಕೇಂದ್ರದ ಲ್ಯಾಬ್ ತಂತ್ರಜ್ಞೆ ಅಶ್ವತಿ ಅವರು ಕೊರೋನಾ ವೈರಸ್‍ನಿಂದ ಮೃತಪಟ್ಟರು. ಇಪ್ಪತ್ತೈದು ವರ್ಷದ ಅಶ್ವತಿ ಮೇಪ್ಪಾಡಿ ಮೂಲದವರು.
ಅಶ್ವತಿ ಅವರು ಸುಲ್ತಾನ್ ಬತ್ತೇರಿ ಸಾರ್ವಜನಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು.