ಕೊಚ್ಚಿ: ಕೊಚ್ಚಿಯ ನೆಡುಂಬಸ್ಸೇರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪೂರ್ವವಾದ ಬೃಹತ್ ಪ್ರಮಾಣದ ಚಿನ್ನದ ಬೇಟೆ ನಡೆದಿದೆ. ಮಾವಿನ ರಸದೊಂದಿಗೆ ಚಿನ್ನ ಬೆರೆಸಿ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಸುಮಾರು 2.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ದುಬೈನ ಪ್ರಯಾಣಿಕರಿಂದ ನಾಲ್ಕು ಬಾಟಲ್ ಜ್ಯೂಸ್ ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಕಣ್ಣೂರು ನಿವಾಸಿಯನ್ನು ಬಂಧಿಸಲಾಗಿದೆ.
ಬ್ಯಾಗೇಜ್ ತನಿಖೆ ನಡೆಸುವ ವೇಳೆ ಚಿನ್ನವನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಜ್ಯೂಸ್ ರೂಪದಲ್ಲಿ ಕಳ್ಳಸಾಗಣೆ ಮಾಡಲಾಗಿತ್ತು. ದೇಶದಲ್ಲೇ ಈ ರೀತಿಯಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಮೊದಲ ಪ್ರಯತ್ನ ಇದಾಗಿದೆ ಎಂದು ಅಂದಾಜಿಸಲಾಗಿದೆ. ಪ್ರತಿ ಬಾರಿಯೂ ಚಿನ್ನ ಕಳ್ಳಸಾಗಾಣಿಕೆದಾರರು ಚಿನ್ನವನ್ನು ಕಳ್ಳಸಾಗಣೆ ಮಾಡಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವುದು ಕಸ್ಟಮ್ಸ್ ಗೆ ತಲೆನೋವಾಗಿ ಪರಿಣಮಿಸಿದೆ.