ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲದ ಚಂದ್ರಗಿರಿ ವಲಯ ಬಜೆ ಘಟಕ ಅತ್ತಿಕ್ಕಜೆ ಮುನಿಯಂಗಳ ರಾಧಾಕೃಷ್ಣ ಭಟ್ಟರ ಮನೆಯಲ್ಲಿ ಕೊರೊನ ಮಹಾಮಾರಿಯ ನಿವಾರಣೆ ಪ್ರಯುಕ್ತ ಕರ್ವಜೆ ವೇ. ಮೂ. ಕೇಶವ ಜೋಯಿಸರ ನೇತೃತ್ವದಲ್ಲಿ ಕಳೆದ ಒಂದು ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿದ್ದ ವಿವಿಧ ಔಷಧೀಯ ಗುಣೋಪೇತ ಸಮಿಧೆ, ವನಸ್ಪತಿಗಳಿಂದ ನಡೆಸಿದ ಪ್ರಜಾಪತಿ ಹವನವು ಮಹಾ ಗಣಪತಿ ಹವನ ದೊಂದಿಗೆ ಸಂಪೂರ್ಣಗೊಂಡಿತು.
ಕಳೆದ ವರ್ಷ ಮಾ. 25 ರಂದ ಪ್ರಾರಂಭಿಸಲಾಗಿರುವ ಹೋಮವನ್ನು ರಾಧಾಕೃಷ್ಣ ಭಟ್ಟರು ತಮ್ಮ ನಿವಾಸದಲ್ಲಿ ನಿರಂತರವಾಗಿ ಈ ತನಕ ನಡೆಸಿಕೊಂಡುಬರುತ್ತಿದ್ದರು. ಶಾಸನತಂತ್ರ ಜ್ಯೋತಿಷ್ಯ ಸಂಯೋಜಕ ನವನೀತ ಪ್ರಿಯ ಕ್ಯೆಪಂಗಳ, ವಲಯ ಮಾತೃಪ್ರಧಾನೆ ಗೀತಾಲಕ್ಷ್ಮೀ ಉಪಸ್ಥಿತರಿದ್ದರು.
ಮಹಾ ಗಣಪತಿ ಹವನ, ಪ್ರಜಾಪತಿ ಹವನ, ಏಕಾದಶ ರುದ್ರ ಶಿವಪೂಜೆ, ಮಾತೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮಗಳು ಸಾಂಗವಾಗಿ ಜರಗಿದವು.
ಏನಿದು ಪ್ರಜಾಪತಿ ಹವನ:
ವಿಶೇಷವಾಗಿ ರೋಗರುಜಿನಗಳ ನಾಶ ಮತ್ತು ಪ್ರಕೃತಿಯ ಆರೋಗ್ಯ ಸಮತೋಲನ ಅಸ್ತಿತ್ವದ ಪಾಲನೆಗಾಗಿ ಅಣುನಾಶಕ ವೇದಮಂತ್ರಗಳಿಂದ ಪ್ರಜಾಪತಿ ಹವನವನ್ನು ಮಾಡಲಾಗುತ್ತದೆ.