HEALTH TIPS

ಬೆಂಕಿಗೆ ತುಪ್ಪ-:ಪ್ರಧಾನಿ ಮೋದಿಯ ಒತ್ತಡ ಸಹಿಸಿಕೊಳ್ಳಲಾಗದೆ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸಾವು- ಉದಯನಿಧಿ ಸ್ಟಾಲಿನ್

      ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡವನ್ನು ಸಹಿಸಿಕೊಳ್ಳಲಾಗದೆ ಹಿರಿಯ ಮುಖಂಡರಾದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಮೃತಪಟ್ಟರು ಎಂಬ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಗುರುವಾರ ನೀಡಿದ್ದ ವಿವಾದಾತ್ಮಕ  ಹೇಳಿಕೆ ನಂತರ ತಮಿಳುನಾಡು ವಿಧಾನಸಭಾ ಚುನಾವಣಾ ಪ್ರಚಾರ ಕಣ ಹೊಸ ಮಟ್ಟಕ್ಕೆ ಇಳಿದಿದೆ.

     ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಗ್ಗೆ ಡಿಎಂಕೆ ಮತ್ತೋರ್ವ ಮುಖಂಡ ಎ. ರಾಜಾ ಅವಹೇಳನಕಾರಿ ಹೇಳಿಕೆ ನೀಡಿದ್ದ ಬೆನ್ನಲ್ಲೇ, ಇದೀಗ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆಯಿಂದ ಬಿಜೆಪಿ ಕುದಿಯುತ್ತಿದ್ದು,  ಸ್ಟಾಲಿನ್ ಪುತ್ರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. 

     ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರ ಮಕ್ಕಳು ಉದಯನಿಧಿ ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
'' ಉದಯನಿಧಿ ಸ್ಟಾಲಿನ್, ದಯವಿಟ್ಟು, ನಿಮ್ಮ ಚುನಾವಣಾ ಪ್ರಚಾರದಲ್ಲಿ ನನ್ನ ತಾಯಿಯ ನೆನಪನ್ನು ಬಳಸಬೇಡಿ. ನಿಮ್ಮ ಹೇಳಿಕೆ ತಪ್ಪು. ಪ್ರಧಾನಿ ಮೋದಿ ಯಾವಾಗಲೂ ನನ್ನ ತಾಯಿಗೆ ಗೌರವ  ನೀಡುತ್ತಿದ್ದರು. ನಿಮ್ಮ ಹೇಳಿಕೆ ನೋವುಂಟು ಮಾಡಿದೆ'' ಎಂದು ಬನ್ಸೂರಿ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

    "ಚುನಾವಣಾ ಒತ್ತಡವಿದೆ ಎಂಬುದು ನನಗೆ ತಿಳಿದಿದೆ. ಆದರೆ,  ನೀವು ಸುಳ್ಳು ಹೇಳಿದಾಗ ಮತ್ತು ನನ್ನ ತಂದೆಯ ಸ್ಮರಣೆಯನ್ನು ಅಗೌರವಿಸಿದಾಗ ನಾನು ಮೌನವಾಗಿರುವುದಿಲ್ಲ. ಅಪ್ಪ ಮತ್ತು ನರೇಂದ್ರ ಮೋದಿ ಅವರ ನಡುವೆ ರಾಜಕೀಯಕ್ಕೆ ಮೀರಿದ ವಿಶೇಷ ಬಾಂಧವ್ಯವಿತ್ತು. ಅಂತಹ ಸ್ನೇಹತ್ವವನ್ನು ಸಾಕಷ್ಟು ತಿಳಿದುಕೊಳ್ಳಳು ನೀವು ಅದೃಷ್ಟವಂತಾರಾಗಲಿ" ಎಂದು ಪ್ರಾರ್ಥಿಸುವುದಾಗಿ ಸೋನಾಲಿ ಜೇಟ್ಲಿ ಬಕ್ಷಿ ಹೇಳಿದ್ದಾರೆ.

     ಈ ಸಂಬಂಧ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿನ ಬಿಜೆಪಿ ನಿಯೋಗ ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಗಳನ್ನು ಭೇಟಿ ಮಾಡಿ, ದೂರು ದೂಖಲಿಸಿದ್ದು, ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಉದಯನಿಧಿ ಸ್ಟಾಲಿನ್ ಅವರನ್ನು ಪ್ರಚಾರದಿಂದ ನಿಷೇಧಿಸುವಂತೆ ತಮಿಳುನಾಡು ಬಿಜೆಪಿ ಘಟಕ ಆಗ್ರಹಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries