HEALTH TIPS

ಲಸಿಕೆ ಕುರಿತ ಅನುಮಾನದಿಂದಲೇ ಕೊರೊನಾ ಹೆಚ್ಚಳ: ಸಚಿವ ಹರ್ಷವರ್ಧನ್

           ನವದೆಹಲಿ: ಕೇಂದ್ರ ಸರ್ಕಾರದ ಕೋವಿಡ್‌ ನಿರ್ವಹಣೆಯನ್ನು ಟೀಕಿಸಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, 'ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಜನರಿಗೆ ಲಸಿಕೆ ಹಾಕಿಸುವ ಬದಲಿಗೆ, ಲಸಿಕೆ ವಿರುದ್ಧ ಅನುಮಾನ ವ್ಯಕ್ತಪಡಿಸುತ್ತಾ ಕೊರೊನಾ ಎರಡನೇ ಅಲೆ ಹರಡಲು ಕಾರಣರಾದರು' ಎಂದು ಆರೋಪಿಸಿದ್ದಾರೆ.

         ಮನಮೋಹನ್ ಸಿಂಗ್ ಅವರು ಕೋವಿಡ್‌ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದ ಬಗ್ಗೆ ಉಲ್ಲೇಖಿಸಿದ ಹರ್ಷವರ್ಧನ್, 'ನಿಮ್ಮ ಪತ್ರವನ್ನು ಬರೆದುಕೊಟ್ಟ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ನಿಮ್ಮ ನಿಲುವಿಗೆ ಅಪಚಾರ ಎಸಗಿದ್ದಾರೆ' ಎಂದು ದೂರಿದ್ದಾರೆ.

        'ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ಪ್ರಮುಖ ಅಸ್ತ್ರ ಎಂದು ನೀವು ಅರ್ಥ ಮಾಡಿಕೊಂಡಿದ್ದೀರಿ. ಆದರೆ ನಿಮ್ಮ ಪಕ್ಷದ ಕೆಲವು ನಾಯಕರ ಬೇಜವಾಬ್ದಾರಿ 'ಸಾರ್ವಜನಿಕ' ಹೇಳಿಕೆಗಳಿಂದಾಗಿ ಲಸಿಕೆ ಹಾಕಿಸುವ ಕಾರ್ಯಕ್ರಮಕ್ಕೆ ಹಿನ್ನಡೆ ಉಂಟಾಯಿತು. ಕಾಂಗ್ರೆಸ್ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಹಿರಿಯ ನಾಗರಿಕರಿಗೆ ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೂ ಸಮರ್ಪಕವಾಗಿ ಲಸಿಕೆ ಹಾಕಿಸಲಾಗಿಲ್ಲ' ಎಂದು ಟ್ವೀಟ್‌ ಮಾಡಿದ್ದಾರೆ.

           'ರಾಜ್ಯಗಳ ಹೊಣೆಗಾರಿಕೆಯ ಸ್ಥಾನದಲ್ಲಿರುವ ನಿಮ್ಮ ಪಕ್ಷದ ನಾಯಕರು ಸಹ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಂತೆ ಕಾಣುತ್ತಿಲ್ಲ' ಎಂದು ಛೇಡಿಸಿರುವ ಅವರು, ದೇಶಕ್ಕೆ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳಿಗೆ ಲಸಿಕೆ ಲಭ್ಯವಾಗುವಂತೆ ಮಾಡಿದ ನಮ್ಮ ವಿಜ್ಞಾನಿಗಳಿಗೆ ಮತ್ತು ಲಸಿಕೆ ತಯಾರಕರಿಗೆ ಕಾಂಗ್ರೆಸ್ ಪಕ್ಷ ಕನಿಷ್ಠ ಕೃತಜ್ಞತೆಯನ್ನೂ ಅರ್ಪಿಸಿಲ್ಲ ಎಂದು ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries