ಕಾಸರಗೋಡು: ವಿಧಾನಸಭೆ ಚುನಾವಣೆ ವೇಳೆ ಮತಚಾಯಿಸುವ ನಿಟ್ಟಿನಲ್ಲಿ ಫೆÇಟೋ ಸಹಿತ ಇರುವ ಮತದಾರರ ಸ್ಲಿಪ್ ಜತೆಗೆ ಗುರುತುಚೀಟಿಯೂ ಹೊಂದಿರಬೇಕು ಎಂದು ಚುನಾವಣೆ ಆಯೋಗ ತಿಳಿಸಿದೆ.
ಚುನಾವಣೆ ಆಯೋಗ ನೀಡುವ ಗುರುತು ಚೀಟಿ ಮತ್ತಿತ್ತರ 11 ದಾಖಲೆಗಳಲ್ಲಿ ಯಾವುದಾದರೂ ಒಂದುಜತೆಗಿರಬೇಕು. ಚುನಾವಣೆ ಆಯೋಗದ ಗುರುತುಚೀಟಿ ಹೊಂದಿರುವವರು ಅದನ್ನೇ ಹಾಜರುಪಡಿಸಬೇಕು. ಕೇರಳದಲ್ಲಿ ಸಹಕಾರಿ ಬ್ಯಾಂಕ್‍ಗಳ ಫೆÇೀಟೋ ಲಗತ್ತಯಿಸಿರುವ ಬ್ಯಾಂಕ್ ಪಾಸ್ ಪುಸ್ತಕವನ್ನು ಗುರುತು ಎಂಬ ರೀತಿ ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ತಿಳಿಸಿದೆ. ಚುನಾವಣೆ ಆಯೋಗದ ಗುರುತು ಚೀಟಿ ಹಾಜರುಪಡಿಸಲು ಸಾಧ್ಯವಾಗದೇ ಇರುವವರು ಈ ಕೆಳಗೆ ತಿಳಿಸಲಾದ
ಆಧಾರ್ ಕಾರ್ಡ್, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿ ಪಾಸ್ ಪುಸ್ತಕ, ಉದ್ಯೋಗ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ವಾಹನ ಚಾಲನೆ ಪರವಾನಗಿ, ಪಾನ್ ಕಾರ್ಡ್, ನ್ಯಾಷನಲ್ ಪಾಪುಲೇಷನ್ ರೆಜಿಸ್ಟರ್ (ಎನ್.ಪಿ.ಆರ್.) ವ್ಯಾಪ್ತಿಯ ರೆಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ(ಆರ್.ಜಿ.ಎ.) ನೀಡುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್ ಪೆÇೀರ್ಟ್, ಫೆÇಟೋ ಸಹಿತದ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರದ, ಸಾರ್ವಜನಿಕ ಸಂಸ್ಥೆಯ, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಕಾರ್ಮಿಕರಿಗೆ ನೀಡುವ ಗುರುತು ಚೀಟಿ, ಶಾಸಕ, ಸಂಸದರ ಅಧಿಕೃತ ಗುರುತು ಚೀಟಿ ಬಳಸಬಹುದಾಗಿದೆ.