ಕಾಸರಗೋಡು: ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕೇರಳದಲ್ಲಿ ತನಿಖೆ ನಡೆಸುತ್ತಿರುವ ಕೇಂದ್ರ ಏಜನ್ಸಿಗಳ ವಿರುದ್ಧ ಕೇರಳ ಸರ್ಕಾರ ನ್ಯಾಯಾಂಗ ತನಿಖೆಗೆ ಮುಂದಾಗಿರುವುದು ಫೆಡರಲ್ ವ್ಯವಸ್ಥೆಯ ಉಲ್ಲಂಘನೆ ಹಾಗೂ ಸಂವಿಧಾನ ವಿರೋದಿÉ ಎಂದು ಭಾರತೀಯ ವಕೀಲರ ಪರಿಷತ್ ಪರಿಷತ್ ಪ್ರಧಾನ ಕಾರ್ಯದರ್ಶಿ ಆರ್. ರಾಜೇಂದ್ರನ್ ತಿಳಿಸಿದ್ದಾರೆ.
ಅವರು ಸಂಘಟನೆ ಕಾಸರಗೋಡು ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಘಟಕ ಅಧ್ಯಕ್ಷ ಎ.ಸಿ ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಿಗೆ ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ವಿಮಾ ಸಂರಕ್ಷಣೆ ಒದಗಿಸಬೇಕು, ವೆಲ್ಫೇರ್ ನಿಧಿಯನ್ನು 20ಲಕ್ಷಕ್ಕೇರಿಸಬೇಕು ಮುಂತಾದ ಬೇಡಿಕೆಗಳ ಠರಾವು ಮಂಡಿಸಲಾಯಿತು.
ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷ ಬಿ.ರವೀಂದ್ರನ್, ಕೆ.ರಾಜೇಶ್, ಸಿ.ಕೆ ಶ್ರೀನಿವಾಸನ್ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ. ಕರುಣಾಕರನ್ ನಂಬ್ಯಾರ್ ಸ್ವಾಗತಿಸಿದರು. ಕೆ. ಮುರಳೀಧರನ್ ವಂದಿಸಿದರು.