ಕಾಸರಗೋಡು: ಕುಂಬಳೆ ಸೀಮೆಯ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನಿನ್ನೆ ಧ್ವಜಾರೋಹಣ ನಡೆಯಿತು. ಬೆಳಗ್ಗೆ 6ಕ್ಕೆ ವೇದಪಾರಾಯಣ, 9ಕ್ಕೆ ಧ್ವಜಾರೋಹಣ, 11ಕ್ಕೆ ತುಲಾಭಾರ ಸೇವೆ ನಡೆಯಿತು. ಪ್ರತಿದಿನ ಉತ್ಸವ ಬಲಿ ನಡೆಯುವುದು. ಇಂದು ವಿಷುಕಣಿ ವಿಶೇಷ ಪೂಜೆ, ಉತ್ಸವ ಬಲಿ ನಡೆಯುತ್ತಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ ಕೈಬಿಡಲಾಗಿದೆ. ಐದು ದಿವಸಗಳ ಕಾಲ ಉತ್ಸವ ನಡೆಯಲಿದ್ದು, ಏ. 17ರಂದು ರಾತ್ರಿ ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.