ಬದಿಯಡ್ಕ: ದೇಶೀ ತಳಿ ಗೋಮೂತ್ರ ಪೌಡರ್ ಕ್ಯಾಪ್ಸ್ಯುಲ್ " ಸುರಭಿ ಸಾರ " ಉತ್ಪನ್ನವನ್ನು ದಿ ಟೈಮ್ಸ್ ಗ್ರೂಪ್ ನವರು ಟೈಮ್ಸ್ ಬಿಸಿನೆಸ್ಸ್ ಅವಾಡ್ರ್ಸ್ 2021 ಗೆ ಆಯ್ಕೆ ಮಾಡಿ "ಎಕ್ಸಲೆಂಟ್ ಹೆಲ್ತ್ ಸಪ್ಲಿಮೆಂಟ್-ಕನ್ಸ್ಯೂಮರ್ ಚಾಯ್ಸ್ ಅವಾರ್ಡ್ ನ್ನು ನೀಡಿರುತ್ತಾರೆ.
ಮಾರ್ಚ್ 31 ರಂದು ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದ ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಸುರಭಿಸಾರ ಉತ್ಪನ್ನದ ಉತ್ಪಾದಕ ಬಿ ರಾಘವೇಂದ್ರ ಹೆಮ್ಮಣ್ಣ ಅವರಿಗೆ ಅವಾರ್ಡನ್ನು ನೀಡಿದರು.
ಅವಾರ್ಡ್ ದೊರೆತ ಬಗ್ಗೆ ಬಿ ರಾಘವೇಂದ್ರ ಹೆಮ್ಮಣ್ಣ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ " ಈ ಸಂದರ್ಭದಲ್ಲಿ ನಾವು ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ , ಮಾನವ ಕುಲಕ್ಕೆ ವರದಾನವಾದ ಈ ಉತ್ಪನ್ನದ ಆವಿಷ್ಕಾರಕ್ಕೆ ಕಾರಣಿಕರ್ತರಾಗಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಇವರ ಚರಣ ಕಮಲಕ್ಕೆ ಈ ಗೌರವವನ್ನು ಸಮರ್ಪಿಸುತ್ತಿದ್ದೇವೆ " ಎಂದು ತಿಳಿಸಿ ಸಂತಸವನ್ನು ವ್ಯಕ್ತಪಡಿಸಿದರು.