ಕುಂಬಳೆ: ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ 2020- 2021 ನೇ ಸಾಲಿನ ಎರಡು ತಂಡ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸ್ಪಂದನ ಕಾರ್ಯಕ್ರಮ ಬುಧವಾರ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಡನಾಡು ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ಕಕ್ಕಳ ಮಾತನಾಡಿ "ಪ್ರತಿಯೊಬ್ಬರೂ ಭಾವನೆ, ಅನಿಸಿಕೆಗಳನ್ನು ವ್ಯಕ್ತಪಡಿಸಿರುವುದು ಶಿಕ್ಷಣ ಸಂಸ್ಥೆಯ ಅಭಿಮಾನದ ಸಂಕೇತ. ಶಾಲಾ ಅಧ್ಯಾಪಕರಲ್ಲಿರುವ ಗೌರವ ಭಾವ, ಶಾಲೆಯ ಬಗ್ಗೆ ಮೆಚ್ಚುಗೆ,ಒಡನಾಡಿಗಳಲ್ಲಿರುವ ಸ್ನೇಹ,ಮೊದಲಾದ ಸಕಾರಾತ್ಮಕ ಅಂಶಗಳ ವ್ಯಕ್ತಪಡಿಸುವಿಕೆ ಜೀವನದ ಮರೆಯಲಾಗದ ಘಟನೆಗಳಲ್ಲಿ ಒಂದಾಗಿರುತ್ತದೆ. ಇಂತಹ ಸನ್ನಡತೆಯ ಹೊಳಪು ಸದಾ ಹರಿಯುತ್ತಿರಲಿ. ಮನೆಗೂ ಹಿರಿಯರಿಗೂ ಶಾಲೆಗೂ ಬದುಕಿನ ಯಶÀಸ್ಸಿಂದ ಕೀರ್ತಿ ತರಬೇಕು ಎಂದರು.
ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ, ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ರಕ್ಷಕ-ಶಿಕ್ಷಕ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ, ಸಂಸ್ಕøತ ಅಧ್ಯಾಪಕ ವಿಜಯ ಕಾನ, ಶಿಕ್ಷಕಿ ಶಿವಕುಮಾರಿ ಕುಂಚಿನಡ್ಕ, ಅಧ್ಯಾಪಕ ಹರಿಪ್ರಸಾದ್, ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಮೊದಲಾದವರು ಮಕ್ಕಳನ್ನುದ್ದೇಶಿಸಿ ಮಾತನಾಡಿ ಹಿತವಚನ ಹೇಳಿದರು.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಯೊಬ್ಬರೂ ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಬೆಳಗುವ ಹಣತೆಯನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿ ,ಒಂಬತ್ತನೆತರಗತಿ ವಿದ್ಯಾರ್ಥಿ ಕಣ್ಣನ್ ಕಾರ್ತಿಕೇಯನ್ ಸ್ವಾಗತಿಸಿ, ವಿದ್ಯಾರ್ಥಿನಿ ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿ, ಶ್ರವಣಕುಮಾರ ವಂದಿಸಿದರು.