ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಈ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಧೈರ್ಯ ತುಂಬಿದ್ದಾರೆ.
ನಿನ್ನೆ ರಾತ್ರಿ 8.45ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಮತ್ತೇ ಲಾಕ್‌ಡೌನ್ ಮಾಡುವುದಿಲ್ಲ ಎಂದು ಘೋಷಿಸಿದರು. ಇನ್ನು ಲಾಕ್‌ಡೌನ್ ಕೊನೆಯ ಅಸ್ತ್ರವಾಗಬೇಕು. ಕೊರೋನಾ ನಿಗ್ರಹಕ್ಕೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂದರು.
ಇನ್ನು ದೇಶದಲ್ಲಿ ನಡೆಯುತ್ತಿರುವ ಯಾವುದೇ ಕೆಲಸ ಹಾಗೂ ಕಾಮಗಾರಿಗಳು ನಿಲ್ಲುವುದಿಲ್ಲ. ಕಾರ್ಮಿಕರು ಯಾವುದೇ ಕಾರಣಕ್ಕೂ ವಲಸೆ ಹೋಗಬೇಡಿ. ಕೊರೋನಾವನ್ನು ನಿಯಂತ್ರಿಸಲು ಕೈಜೋಡಿಸಿ ಎಂದು ಮನವಿ ಮಾಡಿದರು.
ಕೊರೋನಾ ಎರಡನೇ ಅಲೆಯಿಂದಾಗಿ ದೇಶಕ್ಕೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. ಮಹಾಮಾರಿಗೆ ಜೀವಗಳು ಬಲಿಯಾಗುತ್ತಿವೆ. ಈ ಸಂಕಷ್ಟದ ಸಮಯದಲ್ಲಿ ನಾನು ನಿಮ್ಮ ಜೊತೆಗಿದ್ದೇನೆ. ದೇಶದಲ್ಲಿ ಅಗತ್ಯ ಲಸಿಕೆ ಸಿದ್ಧವಿದೆ. ಮುಂದಿನ ತಿಂಗಳಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ ಎಂದರು.
ಮೇಡ್ ಇನ್ ಇಂಡಿಯಾದಡಿ ನಮ್ಮದೇ ಎರಡು ಲಸಿಕೆಗಳು ಸಿದ್ಧವಾಗಿವೆ. ಲಸಿಕೆ ಉತ್ಪಾದನೆಯಲ್ಲಿ ತಯಾರಿಕಾ ಕಂಪನಿಗಳು ನಮಗೆ ಅಗತ್ಯ ಸಹಕಾರ ನೀಡುತ್ತಿವೆ. ಇನ್ನು ಕೊರೋನಾ ರೋಗಿಗಳನ್ನು ಕಾಪಾಡಲು ವೈದ್ಯರು, ನರ್ಸ್ ಗಳು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಋಣಿಯಾಗಿರೋಣ ಎಂದು ಹೇಳಿದರು.
2020ರಲ್ಲಿ ಕೊರೋನಾ ನಿರ್ವಹಣೆ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇರಲಿಲ್ಲ. ಹೀಗಾಗಿ ಲಾಕ್ ಡೌನ್ ಮಾಡಬೇಕಾಯಿತು. ಆದರೆ ಈಗ ಪರಿಸ್ಥಿತಿ ಸುಧಾರಿಸಿವೆ. ನಮ್ಮದೆ ಲಸಿಕೆ ತಯಾರಾಗುತ್ತಿದೆ. ಪಿಪಿಕಿಟ್ ಗಳನ್ನು ತಯಾರಿಸಿಕೊಳ್ಳುತ್ತಿದ್ದೇವೆ. ಎಲ್ಲಾ ಸವಾಲತ್ತುಗಳನ್ನು ನಾವೇ ತಯಾರಿಸಿಕೊಳ್ಳುತ್ತಿದ್ದೇವೆ ಹೀಗಾಗಿ ಹೆದರುವ ಪ್ರಮೆಯವಿಲ್ಲ ಎಂದರು.