HEALTH TIPS

ಜಗತ್ತಿನ ಪ್ರಮುಖ ಲಸಿಕೆ ತಯಾರಕ ಸಂಸ್ಥೆಗಳನ್ನು ಹೊಂದಿರುವ ಭಾರತ ಧನ್ಯ: ವಿಶ್ವಬ್ಯಾಂಕ್

           ವಾಷಿಂಗ್ಟನ್: ಕೊವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜಗತ್ತಿನ ಪ್ರಮುಖ ಲಸಿಕೆ ತಯಾರಕ ಸಂಸ್ಥೆಗಳನ್ನು ಹೊಂದಿರುವ ಭಾರತ ನಿಜಕ್ಕೂ ಅದೃಷ್ಟವಂತ ದೇಶ ಎಂದು ವಿಶ್ವಬ್ಯಾಂಕ್ ಶ್ಲಾಘಿಸಿದೆ.

         ಜಗತ್ತಿನ ವಿವಿಧ ದೇಶಗಳಿಗೆ ಕೋವಿಡ್ ಲಸಿಕೆ ವಿತರಣೆ ಮಾಡುತ್ತಿರುವ ಭಾರತ ದೇಶದ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರು, 'ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದಂತಹ ಜಗತ್ತಿನ ದೈತ್ಯ ಲಸಿಕಾ ತಯಾರಕಾ ಸಂಸ್ಥೆಗಳನ್ನು ಹೊಂದಿರುವ ಭಾರತ ನಿಜಕ್ಕೂ ಪುಣ್ಯವಂತ ನಾಡು ಎಂದು ಬಣ್ಣಿಸಿದ್ದಾರೆ.

          ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗೂ ಮುನ್ನ ನಡೆದ ರೌಂಡ್‌ಟೇಬಲ್ ಸಭೆಯ ಸಂದರ್ಭದಲ್ಲಿ ಮಾತನಾಡಿದ ಮಾಲ್ಪಾಸ್ ಅವರು, 'ನಾನು ಭಾರತದ ಸೆರಮ್ ಸಂಸ್ಥೆಯೊಂದಿಗೆ ಸಾಕಷ್ಟು ಚರ್ಚೆ ನಡೆದ್ದೇನೆ. ಜಾಗತಿಕ ಲಸಿಕೆಗಳ ಪ್ರಮುಖ ತಯಾರಕರನ್ನು ಹೊಂದಿರುವ ಭಾರತವು ನಿಜಕ್ಕೂ ಧನ್ಯ. ಸ್ಥಳೀಯ ಉತ್ಪಾದನೆಗೆ ರಾಷ್ಟ್ರೀಯ ಅವಶ್ಯಕತೆಗಳು ಏನೆಂಬುದರ ಬಗ್ಗೆ ಹೆಚ್ಚು ಪಾರದರ್ಶಕತೆಯನ್ನು ಪ್ರೋತ್ಸಾಹಿಸಿದ್ದೇನೆ ಮತ್ತು ಅದು ವಿಶ್ವದಾದ್ಯಂತದ ದೇಶಗಳಿಗೆ ವಿಸ್ತರಿಸುತ್ತದೆ ಎಂದು ಹೇಳಿದರು.

           'ಜಗತ್ತಿನ ದೈತ್ಯ ದೇಶಗಳಾದ ಅಮೆರಿಕ ಅಥವಾ ಯುರೋಪ್, ಅಥವಾ ದಕ್ಷಿಣ ಆಫ್ರಿಕಾದಲ್ಲಿ, ಸ್ಥಳೀಯ ಬೇಡಿಕೆಗಳನ್ನು ಪೂರೈಸಲು ಅವರ ಸ್ಥಳೀಯ ಉತ್ಪಾದನೆಯ ಅವಶ್ಯಕತೆಗಳು ಯಾವುವು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಭಾರತವು ಅದರ ಲಸಿಕೆಗಳ ನಿರ್ಮಾಣ ಹೆಚ್ಚಳದಿಂದ ದೇಶೀಯ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸುತ್ತಿದೆ. ನಾವು ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಮಾಲ್ಪಾಸ್ ಹೇಳಿದರು.

          ಇದೇ ವೇಳೆ ಕೇವಲ ಲಸಿಕೆ ತಯಾರಿಕೆ ಮಾತ್ರವಲ್ಲ.. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಗಳನ್ನು ಶೀಘ್ರವಾಗಿ ತಲುಪಿಸುವುದು ಮುಖ್ಯ ಮತ್ತು ಮಹತ್ವದ್ದಾಗಿದೆ.. ಲಸಿಕೆಗಳ ಸರಬರಾಜನ್ನು ಬಡ ದೇಶಗಳು ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಗಲು ಅವಕಾಶ ನೀಡುವುದು ಜಗತ್ತಿಗೆ ಹೆಚ್ಚಿನ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ವಿಶ್ವಬ್ಯಾಂಕ್ ಸುಮಾರು 50 ದೇಶಗಳೊಂದಿಗೆ ಲಸಿಕೆ ಸರಬರಾಜು ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಇದು ವಿಶ್ವದ ಎಲ್ಲ ದೇಶಗಳಿಗೂ ಲಭ್ಯವಾಗಬೇಕು ಎಂಬುದು ವಿಶ್ವಬ್ಯಾಂಕ್ ನ ಆದ್ಯತೆಯಾಗಿದೆ. ಲಸಿಕೆಗಳನ್ನು ಖರೀದಿಸಲು ಹಣವನ್ನು ಬಳಸಲು ವಿಶ್ವಬ್ಯಾಂಕ್ ಅವಕಾಶ ನೀಡುತ್ತದೆ. ಅದರ ಬಗ್ಗೆ ಬ್ಯಾಂಕ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಲ್ಪಾಸ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries