ಬದಿಯಡ್ಕ: ಪೆರಡಾಲ ಶ್ರೀಉದನೇಶ್ವರ ದೇವಸ್ಥಾನದಲ್ಲಿ ಮೇ.16 ರಂದು ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ವಿಶೇಷ ಧನ್ವಂತರಿ ಹವನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶತರುದ್ರಾಭಿಷೇಕ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಈ ಸಂಬಂಧ ಆಮಂತ್ರಣ ಪತ್ರಿಕೆಯನ್ನು ವೇದಮೂರ್ತಿ ಶಿವರಾಮ ಭಟ್ ಬಿಡುಗಡೆಗೊಳಿಸಿದರು. ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮೊಕ್ತೇಸರ ನ್ಯಾಯವಾದಿ ವೆಂಕಟರಮಣ ಭಟ್, ಮೊಕ್ತೇಸರ ಪಿ.ಜಿ.ಜಗನ್ನಾಥ ರೈ, ಪ್ರಮುಖರಾದ ಶ್ರೀಕೃಷ್ಣ ಬದಿಯಡ್ಕ, ವಿಷ್ಣು ಶರ್ಮ ಪಟ್ಟಾಜೆ, ಮಾಜಿ ಆಡಳಿತ ಮೊಕ್ತೇಸರ ಪಿ.ಜಿ.ಚಂದ್ರಹಾಸ ರೈ, ಸೇವಾ ಸಮಿತಿ ಪದಾಧಿಕಾರಿಗಳಾದ ಪದ್ಮನಾಭ ಶೆಟ್ಟಿ ವಳಮಲೆ, ಪುರುಷೋತ್ತಮ ಆಚಾರ್ಯ, ದೇವಸ್ಥಾನದ ಅರ್ಚಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ವಂದಿಸಿದರು.