ತಿರುವನಂತಪುರ: ಕೊರೊನಾ ಲಸಿಕೆಗಳ ಕೊರತೆ ಇದೆ ಎಂಬ ಆತಂಕಗಳ ಮಧ್ಯೆ 2 ಲಕ್ಷ ಡೋಸ್ ಕೊರೋನಾ ಲಸಿಕೆ ರಾಜ್ಯಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಭಾರತ್ ಬಯೋಟೆಕ್‍ನ ಕೊವಾಕ್ಸ್ ರಾಜ್ಯಕ್ಕೆ ನಿನ್ನೆ ಆಗಮಿಸಿದೆ. 68,000 ಡೋಸ್ ಲಸಿಕೆಗಳನ್ನು ತಿರುವನಂತಪುರಕ್ಕೆ , 78,000 ಡೋಸ್‍ಗಳನ್ನು ಎರ್ನಾಕುಳಂ ಮತ್ತು 54,000 ಡೋಸ್‍ಗಳನ್ನು ಕೋಝಿಕ್ಕೋಡ್ ವಿಭಾಗಕ್ಕೆ ತಲುಪಿಸಲಾಗಿದೆ.
ಹೆಚ್ಚುತ್ತಿರುವ ಕೊರೋನಾ ರೋಗಿಗಳ ಹಿನ್ನೆಲೆಯಲ್ಲಿ ಹೆಚ್ಚಿನ ಲಸಿಕೆಗಳನ್ನು ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರಕ್ಕೆ ಸೂಚಿಸಿದ್ದರು. ಪ್ರಸ್ತುತ, ರಾಜ್ಯದಲ್ಲಿ ದಿನಕ್ಕೆ ಎರಡು ಲಕ್ಷ ಡೋಸ್ ಲಸಿಕೆ ವಿತರಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಇದರ ಪ್ರಕಾರ, ಲಸಿಕೆ ಪ್ರಸ್ತುತ ಇನ್ನೂ ಒಂದು ದಿನಕ್ಕೆ ಮಾತ್ರ ಲಭ್ಯವಿತ್ತು.
ಮುಖ್ಯಮಂತ್ರಿಗಳು 50 ಲಕ್ಷ ಡೋಸ್ ಲಸಿಕೆ ನೀಡಬೇಕೆಂದು ಎಂದು ಕೇಂದ್ರ ಸಚಿವ ಹರ್ಷವರ್ಧನ ಅವರಿಗೆ ಬೇಡಿಕೆ ಇರಿಸಿದ್ದರು. 45 ದಿನಗಳ ಒಳಗೆ ಸಾಧ್ಯವಾದಷ್ಟು ಜನರಿಗೆ ಲಸಿಕೆ ವಿತರಿಸಲು ರಾಜ್ಯ ಸರ್ಕಾರ ಗುರಿ ಇರಿಸಿದೆ.