ಕಾಸರಗೋಡು: ನೋಂದಣಿ ನಡೆಸದೇ ಇರುವ ಉದ್ದಿಮೆಗಳ ಕುರಿತು ನ್ಯಾಷನಲ್ ಸ್ಟಾಟಿಸ್ಟಿಕಲ್ ಕಚೇರಿ ಏಪ್ರಿಲ್ ತಿಂಗಳಲ್ಲಿ ಆರಂಭಿಸುವ ಸರ್ವೇ ಸಂಬಂಧ ರೀಜನಲ್ ಟ್ರೈನಿಮಘ್ ಸಮ್ಮೇಳನ ಮಲಬಾರ್ ಛೇಂಬರ್ ಆಫ್ ಕಾಮರ್ಸ್, ಪಿ.ವಿ.ಸ್ವಾಮಿ ಸ್ಮಾರಕ ಸಭಾಂಗಣದಲ್ಲಿ ಜರುಗಿತು. ಕೋಯಿಕೋಡ್ ರೀಜನಲ್ ಕಚೇರಿ ನಿರ್ದೇಶಕ ಮುಹಮ್ಮದ್ ಯಾಸಿರ್ ಉದ್ಘಾಟಿಸಿದರು. ಸರ್ವೇ ಎನ್ಯುಮರೇಟರ್ ಗಳಿಗೆ ಮತ್ತು ಸೂಪರ್ ವೈಸರ್ ಗಳಿಗೆ ಪರಿಣತ ತರಬೇತಿ ನೀಡಲಾಗುತ್ತಿದೆ. ಫೀಲ್ಡ್ ತರಬೇತಿಗಾಗಿ ಮನೆಗಳಿಗೆ ಮತ್ತು ಉದ್ದಿಮೆಗಳಿಗೆ ಭೇಟಿ ನೀಡಲಾಯಿತು.