ಕಾಸರಗೋಡು : ಸ್ತ್ರೀ ಶಕ್ತಿಯನ್ನು ಖಚಿತ ಪಡಿಸುವ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಹೆಣ್ಣುಮಕ್ಕಳೇ ನಿಯಂತ್ರಿಸಿದ್ದ ಮತಗಟ್ಟೆಗಳು ಗಮನ ಸೆಳೆದುವು.
ಕಾಸರಗೋಡು ವಿಧಾನಸಭೆ ಕ್ಷೇತ್ರದ ಪಿಂಕ್ ಬಣ್ಣದ ಪುಗ್ಗೆಗಳಿಂದ ಸಿಂಗಾರದೊಂಡ ಕಮಾನ ಹೊಂದಿದ್ದ ಕಾಸರಗೋಡು ಸರಕಾರಿ ಕಾಲೇಜಿನ 139ನೇ ಮತಗಟ್ಟೆ ಮತದಾತರನ್ನು ಆಕರ್ಷಿಸಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 70ನೇ ನಂಬ್ರ ಮತಗಟ್ಟೆ, ಉದುಮಾ ವಿಧಾನಸಭೆ ಕ್ಷೇತ್ರದ ಕೋಟಿಕುಳಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 96ನೇ ನಂಬ್ರ ಮತಗಟ್ಟೆ, ಕಾಞಂಗಾಡು ವಿಧಾನಸಭೆ ಕ್ಷೇತ್ರದ ಬಲ್ಲ ಈಸ್ಟ್ ಹೈಯರ್ ಸೆಕೆಂಡರಿ ಶಾಲೆಯ 142ನೇ ನಂಬ್ರ ಮತಗಟ್ಟೆ, ತ್ರಿಕರಿಪುರ ವಿಧಾನಸಭೆ ಕ್ಷೇತ್ರದ ನೀಲೇಶ್ವರ ರಾಜಾಸ್ ಶಾಲೆಯ 6ನೇ ನಂಬ್ರ ಮತಗಟ್ಟೆಗಳು ಮಹಿಳಾ ಮತಗಟ್ಟೆಗಳಾಗಿದ್ದುವು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಚುನಾವಣೆ ಆಯೋಗದ ಆದೇಶ ಪ್ರಕಾರ ಮಹಿಳೆಯರೇ ನಿಯಂತ್ರಿಸುವ ಮಹಿಳಾ ಮತಗಟ್ಟೆಗಳನ್ನು (ವಿಮೆನ್ಸ್ ಮೆನೆಜ್ ಮೆಂಟ್ ಪೆÇೀಲಿಂಗ್ ಬೂತ್ ) ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳಲ್ಲಿ ಥರ್ಮಲ್ ತಪಾಸಣೆಯಿಂದ ತೊಡಗಿ ಬೆರಳಿಗೆ ಶಾಯಿ ತಗುಲಿಸುವ ಎಲ್ಲ ಕಾಯಕಗಳನ್ನೂ ಮಹಿಳೆಯರೇ ನಿರ್ವಹಿಸಿದ್ದಾರೆ.