ತಿರುವನಂತಪುರ: ಕೋವಿಡ್ ಸಾಂಕ್ರಾಮಿಕ ರೋಗದ ತೀರ್ವ ಕಟ್ಟೆಚ್ಚರ, ನಿಬಂಧನೆಗಳ ಮಧ್ಯೆ, ಕೇರಳದಲ್ಲಿ ಅಂತಿಮವಾಗಿ ಪ್ರಚಾರ, ಸಂಭ್ರಮಾಚರಣೆಗಳ ಬಳಿಕ ಇಂದು ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಅಣಕು ಮತದಾನದ ನಂತರ 40771 ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಾರಂಭವಾಗಿದೆ. ನಗರ ಪ್ರದೇಶಗಳಲ್ಲಿನ ಮತದಾನ ಕೇಂದ್ರಗಳಲ್ಲಿ ಮತದಾರರ ಉದ್ದದ ಸಾಲುಗಳು ಬೆಳಿಗ್ಗಿನಿಂದಲೇ ಕಂಡುಬಂತು.
ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಸಂಜೆ 7 ಗಂಟೆಗೆ ಮತದಾನ ಕೊನೆಗೊಳ್ಳುತ್ತದೆ. ಸಂಜೆ 6 ರಿಂದ 7ರ ವರೆಗೆ ಕೋವಿಡ್ ರೋಗಿಗಳಿಗೆ ಮತ್ತು ಪ್ರಾಥಮಿಕ ಸಂಪರ್ಕ ಪಟ್ಟಿಯಲ್ಲಿರುವವರಿಗೆ ಮತದಾನ ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಸಂಜೆ 6 ಗಂಟೆಗೆ ಮತದಾನ ಕೊನೆಗೊಳ್ಳುತ್ತದೆ.
ರಾಜ್ಯದ 140 ಕ್ಷೇತ್ರಗಳಲ್ಲಿ ಅಣಕು ಮತದಾನ ನಡೆಸಲಾಯಿತು.ಕಾಸರಗೋಡು ಮತ್ತು ತೊಡುಪುಳದಲ್ಲಿ ಮತದಾನ ಯಂತ್ರಗಳು ದೋಷಪೂರಿತವಾಗಿದೆ ಎಂದು ಕಂಡುಬಂದಿದೆ.ಕಾಸರಗೋಡು ಜಿಲ್ಲೆಯ ಕೋಳಿಯಡ್ಕ ಸರ್ಕಾರಿ ಯುಪಿ ಶಾಲೆಯ 33 ನೇ ಬೂತ್‌ನಲ್ಲಿ ಮತಯಂತ್ರ ದೋಷಪೂರಿತವಾಗಿದ್ದುದು ಕಂಡುಬಂದಿದೆ.